ವಿಜಯನಗರವಾಣಿ
ರಾಯಚೂರು:ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಭಾರತೀಯ ಜನತಾ ಪಕ್ಷದ ಮೈನರಿಟಿ ವತಿಯಿಂದ ಆಚರಿಸಲಾಯಿತು.
ನಗರದ ಕುಷ್ಠ ರೋಗ ಕಲೋನಿಯಲ್ಲಿ ವಾಜಪೇಯಿ ಅವರ ಬಾವಚಿತ್ರಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮಾಲಾರ್ಪಣೆ ಮಾಡಿ ಮಾತನಾಡುತ್ತ ದೇಶದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ 96ನೇ ಮೈನರಿಟಿ ವತಿಯಿಂದ ಆಚರಿಸಲಾಗಿದ್ದು,
ಇಂದು ನಾವು ಮಕ್ಕಳ ಜೊತೆ ಆಚರಿಸುತ್ತಿದ್ದೇವೆ ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ನಂತರ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡುತ್ತ ರಾಷ್ಟ್ರದ ಧೀಮಂತ ನಾಯಕರು ಆದಂತಹ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ವಾರ್ಡ್ ಗಳಲ್ಲಿ ಸೀರೆ ಮತ್ತು ಪುಸ್ತಕಗಳನ್ನು ವಿತರಿಸಲಾಗಿದೆ.ನಗರದ ಇತಿಹಾಸದಲ್ಲಿ ಮನೆಗೆ 10 ಸಾವಿರ ಕೊಡುವುದು ಯಾವ ಸರ್ಕಾರದಲ್ಲಿ ಆಗಿದ್ದಿಲ್ಲ,ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ಜಿಲ್ಲೆಯಲ್ಲಿ 3700 ಮನೆಗಳಿಗೆ 10 ಸಾವಿರ ವಿತರಿಸಲಾಗಿದೆ.70 ವರ್ಷದ ಇತಿಹಾಸದಲ್ಲಿ ಇಂತಹ ಕಾರ್ಯ ಆಗಿದಿಲ್ಲ.ಬಿದಂತಹ ಮನೆಗಳಿಗೆ 5 ಲಕ್ಷ ,ರಿಪೇರಿಗೆ 1ಲಕ್ಷ ಕೊಡುವಂತ ಕೆಲಸ ಮಾಡಿದ್ದೇವೆ ಹಾಗೂ ಯಾವುದೇ ಸಮಸ್ಯೆ ಬರಲಿ ನಾವು ಕ್ಷೇತ್ರದ ಜನರ ಜೊತೆ ಇರುತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ ಡಿ ಎ ಅಧ್ಯಕ್ಷ ವೈ.ಗೋಪಾಲರೆಡ್ಡಿ,ರಮನಂದ ಯಾದವ್,ಕದಗೋಲ್ ರಾಮಚಂದ್ರ,ರವೀಂದ್ರ ಜಲ್ದಾರ್,ಈ.ಶಶಿರಾಜ, ಗೋವಿಂದು,ಮುಕ್ತಿಯಾರ್,ಟಿ.ಮಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.