ಕೇಕ್ ಕತ್ತರಿಸುವ ಮೂಲಕ ಕ್ರಿಸ್ತ ಜಯಂತಿ ಆಚರಣೆ

Share and Enjoy !

Shares
Listen to this article

ವಿಜಯನಗರ ವಾಣಿ

ರಾಯಚೂರು:ಕ್ರಿಸ್ಮಸ್ ಹಬ್ಬದ ಅಂಗವಾಗಿ ಮೆಥೋಡಿಸ್ಟ್ ಕೇಂದ್ರ ದೇವಾಲಯದಲ್ಲಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ತ ಜಯಂತಿಯನ್ನು ಆಚರಿಸಲಾಯಿತು.
ನಗರದ ಮೆಥೋಡಿಸ್ಟ್ ಕೇಂದ್ರ ದೇವಾಲಯದಲ್ಲಿ ಕ್ರಿಸ್ತ ಜಯಂತಿ ಆಚರಣೆ ಮಾಡಿ ನಗರ ಶಾಸಕ ಡಾ. ಶಿವರಾಜ ಪಾಟೀಲ್ ಮಾತನಾಡುತ್ತ ಜನರಿಗೆ ಕೊರೊನ ಮಹಾಮಾರಿಯಿಂದ ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ ಇಂತಹ ಕಷ್ಟದ ಸಮಯದಲ್ಲಿಯೂ ಇಂದು ಅದ್ದೂರಿಯಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಲಾಗಿದೆ.
ಈ ಸಮಾಜವು ನನ್ನು ಶಾಸಕನಾಗಿ ಮಾಡಲು ಶ್ರಮ ಪಟ್ಟಿದರೆ ಮುಂದಿನ ದಿನಗಳಲ್ಲಿ ಈ ಸಮುದಾಯದ ಜೊತೆಗೆ ಇದ್ದು ಪ್ರಾರ್ಥನಾ ಮಂದಿರಗಳ ಹೇಳಿಗೆ ಮತ್ತು ಸಮುದಾಯದ ಕಷ್ಟ ಸುಖಗಳಿಗೆ ನಾನು ಜೊತೆ ಇರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭಾ ಪಾಲಕರದ ಆರ್.ಸೊಮೋಲ್,ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್, ಆರ್ ಡಿ ಎ ಅಧ್ಯಕ್ಷ ವೈ.ಗೋಪಾಲ ರೆಡ್ಡಿ, ನಗರಸಭೆ ಸದಸ್ಯರಾದ,ಜಯಣ್ಣ,ಲಕ್ಷ್ಮಿ,ರವಿಬೋಸರಾಜು,ಜಿ.ರಮೇಶ್, ಕೆ.ಶಾಂತಪ್ಪ,ಸ್ಟಿವನ್ ಬಿನ್ನಿ, ಸನ್ನಿ ರೋನಲ್ಡ್, ರವೀಂದ್ರ ಜಲ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares