ವಿಜಯನಗರವಾಣಿ
ರಾಯಚೂರು:ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ ಕಲ್ಬುರ್ಗಿ, ಶ್ರೀ ಶಿವಂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಜ.9ರಂದು ಉಚಿತ ಕ್ಯಾನ್ಸರ್ ಮತ್ತು ಡಯಾಬಿಟಿಸ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲ್ಬುರ್ಗಿ ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಡಾ.ಶಾಂತಲಿಂಗ ನಿಗುಡ್ಗಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ ಕಲ್ಬುರ್ಗಿ, ಶ್ರೀ ಶಿವಂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಲಯನ್ಸ್ ಕ್ಲಬ್,ಎಸ್ ಕೆ ಈಎಸ್ ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಡಿ.9ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಗರದ ಶ್ರೀ ಶಿವಂ ಆಸ್ಪತ್ರೆಯಲ್ಲಿ ಅಮ್ಮಿಕೊಳ್ಳಲಾಗಿದೆ.
ಕ್ಯಾನ್ಸರ್ ಕಾಯಿಲೆ ಬಗ್ಗೆ ಈ ಭಾಗದ ಜನರಿಗೆ ಜಾಗೃತಿ ಮೂಡಿಸುವ ಕಾರಣದಿಂದಾಗಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಒಂದು ಲಕ್ಷದ ಜನರಲ್ಲಿ 90 ಜನರಿಗೆ ಕ್ಯಾನ್ಸರ್ ಲಕ್ಷಣಗಳು ಕಂಡುಬರುತ್ತದೆ. ಕ್ಯಾನ್ಸರ್ ರೋಗವು 3 ರಿಂದ 4 ನೇ ಹಂತದಲ್ಲಿ ಕಂಡು ಬರುತ್ತದೆ.
ಪುರುಷರಿಗೆ ಧೂಮಪಾನದಿಂದ ಮಹಿಳೆಯರಿಗೆ ಗರ್ಭ ಕೋಶದಿಂದ ಬರುತ್ತದೆ. ಮಹಿಳೆಯರಿಗೆ 40 ವರ್ಷ ಮೇಲ್ಪಟ್ಟವರಿಗೆ ಕ್ಯಾನ್ಸರ್ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತದೆ ಅದರಿಂದ ಜ.9ರಂದು ನಗರದ ಶ್ರೀ ಶಿವಂ ಆಸ್ಪತ್ರೆಯಲ್ಲಿ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಬಾಬುರಾವ್ ಶೇಗುಣಸಿ, ರಾಜ್ ಪುರೋಹಿತ್,ಡಾ.ವೆಂಕಟೇಶ್ ನಾಯಕ,ಕಿಶೋರಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.