ವಿಜಯನಗರವಾಣಿ
ರಾಯಚೂರು: ಡಿ.30ರಂದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗಳು ನಡೆಯಲಿದ್ದು, ಈ ಕಾಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಮೊಬೈಲ್ ಮೂಲಕ ಮಾಹಿತಿಯನ್ನು ರವಾನಿಸಿದ್ದಲ್ಲೀ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ದುರುಗೇಶ್ ಅವರು ಎಚ್ಚರಿಸಿದರು.
ಅವರು ಡಿ.26ರ ಶನಿವಾರ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಮತ ಏಣಿಕೆಗೆ ನಿಯೋಜನೆಗೊಂಡ ಸಿಬ್ವಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಮತ ಎಣಿಕಾ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ಇದೇ ಡಿಸೆಂಬರ್ 30ರ ಬುಧವಾರ ಗ್ರಾಮ ಪಂಚಾಯತ್ ಚುನಾವಣೆಯ ಮತ ಏಣಿಕೆ ಕಾರ್ಯಗಳು ಜಿಲ್ಲೆಯ ಆಯಾ ತಾಲೂಕುಗಳಲ್ಲಿ ಸ್ಥಾಪಿಸಲಾದ ಎಣಿಕಾ ಕೇಂದ್ರಗಳಲ್ಲಿ ನಡೆಯಲಿದೆ, ಅದರ ಹಿನ್ನಲೆಯಲ್ಲಿ ಡಿ.26ರಂದು ರಾಯಚೂರು ಉಪವಿಭಾಗದ ವ್ಯಾಪ್ತಿಯ ಮತ ಎಣಿಕ ಸಿಬ್ಬಂದಿಗಳಿಗೆ ಹಾಗೂ ಲಿಂಗಸೂಗೂರು ಉಪ ವಿಭಾಗದ ವ್ಯಾಪ್ತಿಯ ಮತ ಎಣಿಕ ಸಿಬ್ಬಂದಿಗಳಿಗೆ ಡಿ.28ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ಮತ ಎಣಿಕಾ ಮೇಲ್ವಾಚಾರಕರು ಹಾಗೂ ಎಣಿಕಾ ಸಹಾಯಕರು ತರಬೇತಿಗೆ ಹಾಜರಾಗಿ ಮತ ಎಣಿಕೆ ಕುರಿತಂತೆ ನೀಡಲಾಗುವ ತರಬೇತಿ ಪಡೆಯಬೇಕು, ಮತ ಏಣಿಕೆಗೆ ಒಂದು ಟೇಬಲ್‍ಗೆ ಮೇಲ್ವಿಚಾರಕರು, ಇಬ್ಬರು ಸಹಾಯಕರು ಹಾಗೂ ಒಬ್ಬ ಗ್ರೂಪ್-ಡಿ ಸೇರಿದಂತೆ ನಾಲ್ವರನ್ನು ನಿಯೋಜಿಸಲಾಗಿದೆ, ಮತ ಏಣಿಕೆ ಪೂರ್ವದಲ್ಲಿ ಬೆಳಗ್ಗೆ 6 ಗಂಟೆಗೆ ಎಲ್ಲ ಸಿಬ್ಬಂದಿಗಳು ಹಾಜರಿರಬೇಕು ಎಂದರು.
ಟೇಬಲ್‍ಗಳಿಗೆ ನಿಯೋಜಿಸಲಾದ ಸಿಬ್ಬಂದಿಗಳು ಅಲ್ಲಿಯೇ ಇರಬೇಕು, ಒಂದು ತಂಡ ಬಿಟ್ಟು ಮತ್ತೊಂದು ಕಡೆ ಹೋಗಬಾರದು, ಮತ ಎಣಿಕೆಗೆ ಬೇಕಾದ ಸಲಕರಣೆಗಳು, ಪೆನ್ನು ಪೇನ್ಸಿಲ್ ಪೇಪರ್‍ಗಳನ್ನು ಪಡೆದುಕೊಳ್ಳಬೇಕು, ಎಣಿಕೆ ಪ್ರಾರಂಭವಾದ ನಂತರ ನೀಡಲಾದ ಸ್ಥಳವನ್ನು ಬಿಟ್ಟು ಹೋಗಬಾರದು ಎಂದು ಸೂಚಿಸಿದರು.
ಮತ ಎಣಿಕೆಯ ಮಾಹಿತಿಯನ್ನು ಹೊರಗಿನವರಿಗೆ ನೀಡಬಾರದು, ತಮ್ಮ ಮೊಬೈಲ್‍ಗಳನ್ನು ಬಂದ್ ಮಾಡಿಕೊಂಡಿರಬೇಕು, ಒಂದು ವೇಳೆ ಮೊಬೈಲ್‍ನ ವಾಟ್ಸಾಪ್ ಮೂಲಕ ಮಾಹಿತಿ ಸೋರಿಕೆ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದವರು ಎಚ್ಚರಿಸಿದರು.
ಮತ ಎಣಿಕಾ ವೇಳೆ ಯಾರಾದರೂ ಅನಾರೋಗ್ಯ ಪೀಡಿತರಾದರೆ ಸಂಬಂಧಿಸಿದ ಮೇಲ್ವಿಚಾರಕರಿಗೆ ಮಾಹಿತಿ ನೀಡಬೇಕು, ಏಣಿಕೆ ವೇಳೆ ಶಿಸ್ತಿನಿಂದ ವರ್ತಿಸಬೇಕು ಎಂದರು.
ತಹಶಿಲ್ದಾರ ಹಂಪಣ್ಣ ಸಜ್ಜನ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಡಮನಿ, ತರಬೇತುದಾರ ಸದಾಶಿವಪ್ಪ ಸೇರಿದಂತೆ ಮತ ಏಣಿಕೆ ಸಿಬ್ಬಂದಿಗಳು ಭಾಗವಹಿಸಿದ್ದರು.