ವಿಜಯನಗರವಾಣಿ
ರಾಯಚೂರು:ಡಿ.27.ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣಾ ಹಿನ್ನಲೆಯಲ್ಲಿ ಸಿಂಧನೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 70 ಜನರು ಅವಿವಿರೋದವಾಗಿ ಆಯ್ಕೆ ಗೊಂಡಿದ್ದಾರೆ ಎಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡ ಅವರು ಹೇಳಿದರು.
ಅವರಿಂದು ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆ ಹಿನ್ನಲೆಯಲ್ಲಿ ಇಂದು ಸಿಂಧನೂರು ತಾಲೂಕಿನ ತಮ್ಮ ಸ್ವಗ್ರಾಮ ಜವಾಳಗೇರದ 2ರ ಒಂದನೇ ಮತಗಟ್ಟೆ ಕೇಂದ್ರದಲ್ಲಿ ಮಾತದಾನ ಮಾಡಿ ಮಾತನಾಡಿದ ಅವರು ಇಂದು ನಮ್ಮ ಗ್ರಾಮದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಶಾಂತಿಯುತವಾಗಿ ಮತದಾನ ಆರಂಭವಾಗಿದೆ.ಮತದಾರರು ಆಮಿಷಕ್ಕೆ ಒಳಗಾಗದೆ ಗ್ರಾಮದ ಅಭಿವೃದ್ಧಿಗೆಗಾಗಿ ಒಳ್ಳೆಯ ನಾಯಕನನ್ನು ಆರಿಸಿ ತರಲು ಮತ ಚಲಾಯಿಸಿ.ರಾಜ್ಯದ ವಿವಿಧ ಗ್ರಾಮಗಳಲ್ಲಿ ಹಾರಾಜು ಪ್ರಕ್ರಿಯೆ ನಡೆದಿದೆ ಎಂದು ಆರೋಪಗಳು ಕೇಳಿಬಂದಿವೆ ಅದರರಂತೆ ನಮ್ಮ ತಾಲುಕಿನಲ್ಲಿಯೂ ಆಗಿದೆ ಎಂದು ಮಾಹಿತಿ ಬಂದಿದ್ದು,ಅದನ್ನು ಈಗಾಗಲೇ ತಡೆದು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಗ್ರಾಮದಲ್ಲಿ ಗ್ರಾಮಸ್ಥರು ಒಂದು ಗೂಡಿ ಚುನಾವಣೆ ನಡೆಯದಂತೆ ಅವಿವಿರೋದ ಮಾಡಿದರೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ.ನನ್ನ ಕ್ಷೇತ್ರದಲ್ಲಿ ಗ್ರಾಮದ ಜನರು ಅಭಿವೃದ್ಧಿಗೆ ಸಹಕಾರಿಯಗಲು ಸುಮಾರು 70 ಜನ ಅವಿವಿರೋದವಾಗಿ ಆಯ್ಕೆ ಮಾಡಿದ್ದಾರೆ ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ನಿ ಶಂಕ್ರಮ್ಮ ನಾಡಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.