ಗ್ರಾಮ ಪಂಚಾಯತಿ ಚುನಾವಣಾ ಮತೆಣಿಕೆ ಪ್ರಕ್ರಿಯೆ ಆರಂಭ ಮಸ್ಕಿಯಲ್ಲಿ ಪ್ರಥಮ ಬಾರಿಗೆ ಕೌಂಟಿಗ್.

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ
ಮಸ್ಕಿ:- ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದು ಮತ ಎಣಿಕೆ ಪ್ರಕ್ರಿಯೆ ನಗರದ ದೇವಾನಾಂಪ್ರಿಯ ಸರಕಾರಿ ಪದವಿ ಕಾಲೇಜಿನಲ್ಲಿ ಏರ್ಪಾಡು ಮಾಡಿಕೊಂಡಿದ್ದು ಈಗಾಗಲೇ ಅಭ್ಯರ್ಥಿಗಳು ಮತ್ತು ಏಜೆಂಟರುಗಳು ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ 5 ಗಂಟೆಯಿಂದಲೇ ಮತ ಎಣಿಕೆ ಕೇಂದ್ರದ ಒಳಗೆ ಹೋಗಲು ಅಭ್ಯರ್ಥಿಗಳು ಮತ್ತು ಏಜೆಂಟರುಗಳ ನೂಕು ನುಗ್ಗಲು ಆಗುತ್ತಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತೆಣಿಕೆ ಪ್ರಕ್ರಿಯೆ ಆರಂಭವಾಗಿದ್ದು ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಮತೆಣಿಕೆ ಪ್ರಕ್ರಿಯೆಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ ಮತ್ತು ಸ್ಯಾನಿಟೈಸರ್ ಬಳಸಬೇಕು. ಮತ ಎಣಿಕೆ ಪ್ರಾರಂಭ ಮಾಡಿದ್ದು ಕೇಂದ್ರದ ಒಳಗೆ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕೇಂದ್ರದ ಒಳಗೆ ಹೋಗುವ ಪ್ರತಿಯೊಬ್ಬರನ್ನು ಕೂಡ ತಪಾಸಣೆಯೊಂದಿಗೆ ಒಳಗೆ ಬಿಡಲಾಗುತ್ತಿದೆ.
ಮಸ್ಕಿ ತಾಲ್ಲೂಕಿನಾದ್ಯಂತ ಒಟ್ಟು ೨೧ ಗ್ರಾಮ ಪಂಚಾಯತಿ ಗಳಿದ್ದು ಇದರಲ್ಲಿ ೪ ಗ್ರಾಮ ಪಂಚಾಯತಿ ಗಳು ಚುನಾವಣಾ ಬಹಿಷ್ಕಾರ ಮಾಡಲಾಗಿದ್ದು ಈಗಾಗಿ ೧೭ ಗ್ರಾ.ಪಂ. ಗಳಿಗೆ ಚುನಾವಣೆ. ನಡೆಯುತ್ತಿದ್ದು ತಾಲೂಕಿನಾದ್ಯಂತ ೯೯ ಮತ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಸುಮಾರು ೭೫೦ ಅದಕ್ಕೂ ಹೆಚ್ಚು ಸಿಬಂಧಿಗಳು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಾಲ್ಲೂಕ ಆಡಳಿತ ತಿಳಿಸಿದೆ

Share and Enjoy !

Shares