ಸಿರಿ ಕ್ರಿಯೇಶನ್ಸ್:ಚಾರಿ ಕೆಎ36 ಚಿತ್ರದ ಮುಹೂರ್ತ

Share and Enjoy !

Shares
Listen to this article

ರಾಯಚೂರು:ಸಿರಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತಿರುವ ಚಾರಿ ಕೆಎ36 ಸಿನಿಮಾದ ಮುಹೂರ್ತ ಪೂಜೆಯನ್ನು ನಿರ್ಮಾಪಕರಾದ ವೀರೇಶ್ ರಾಜಲಬಂಡಿ ಮತ್ತು ಶ್ರೀದೇವಿ ರಾಜಲಬಂಡಿ ಅವರು ನೆರವೇರಿಸಿದರು.ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಅಯೋಜಿಸಲಾಗಿದ್ದ ಚಾರಿ ಕೆಎ36 ಸಿನಿಮಾದ ಮುಹೂರ್ತ ಪೂಜೆಯು ಇಂದು ನಡೆದಿದ್ದು.ಸಿರಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಮುಡಿಬರಲಿರುವ ಚೊಚ್ಚಲ ಸಿನಿಮಾ ಇದಾಗಿದ್ದುಸಿನಿಮಾದ ನಿರ್ದೇಶನವನ್ನು ಮಿಸ್ಟರ್ ಚಿಟರ್ ರಾಮಾಚಾರಿ ಚಿತ್ರದ ನಟ ನಿರ್ದೇಶಕರಾದ ರಾಮಾಚಾರಿ ಅವರು ಮಾಡಲಿದ್ದು,ನಿರ್ಮಾಣವನ್ನು ಹೋಟೆಲ್ ಪವನ್ ಮೆನ್ಶನ್ ಮಾಲೀಕರಾದ ವೀರೇಶ್ ರಾಜಲಬಂಡಿ ಮತ್ತು ಶ್ರೀದೇವಿ ರಾಜಲಬಂಡಿ ಅವರು ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಆಗಮಿಸಿ ಶುಭ ಕೋರಿ ಮಾತನಾಡಿದ ಅವರು ಜಿಲ್ಲೆಯಲ್ಲಿ ದೊಡ್ಡ ಬಜೆಟ್ ನಲ್ಲಿ ಚಾರಿ ಕೆಎ36 ಸಿನಿಮಾವನ್ನು ಮಾಡುತ್ತಿದ್ದು, ದೊಡ್ಡ ಮಟ್ಟದಲ್ಲಿ ಈ ಚಿತ್ರ ಹೆಸರು ಮಾಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ ಡಿ ಎ ಅಧ್ಯಕ್ಷರಾದ ವೈ. ಗೋಪಾಲ ರೆಡ್ಡಿ, ಎನ್.ಶಂಕ್ರಪ್ಪ,ರವೀಂದ್ರ ಜಲ್ದಾರ್,ಮಹೇಂದ್ರ ಕುಮಾರ,ನಿರ್ದೇಶಕ ರಾಮಾಚಾರಿ, ಪವನ್ ಆಚಾರಿ,ಈರಣ್ಣ ಬೆಂಗಾಲಿ, ಅಶೋಕ್ ಕುಮಾರ ಜೈನ್, ಪ್ರದೀಪ್ ಮುನೋಳ್ಳಿ, ರಂಗನಾಥ ಕಟ್ಟಿಮನಿ, ಸುನೀಲ್,ದ್ವೈತ, ಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares