ಹಾಲುಮತ ಸಂಸ್ಕೃತಿ ವೈಭವದ ಪೋಸ್ಟ್ ರ ಬಿಡುಗಡೆ.

Share and Enjoy !

Shares
Listen to this article

 

ವಿಜಯನಗರವಾಣಿ
ರಾಯಚೂರು ಜಿಲ್ಲೆ

ದೇವದುರ್ಗ: ಸಮೀಪದ ತಿಂಥಣಿ ಬ್ರೀಜ್ ಶ್ರೀ ಕನಕ ಗುರು ಪೀಠದಲ್ಲಿ ಜನವರಿ 12 ರಿಂದ 13ರ ವರೆಗೆ ಮೂರು ದಿನಗಳಕಾಲ ಜರುಗುವ ಹಾಲುಮತ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಆಮಂತ್ರಣ ಮತ್ತು ಗೋಡೆ ಪೋಸ್ಟರ್ ಗಳನ್ನು ಮಠದಲ್ಲಿ ಭಾನುವಾರ ಬಿಡಗಡೆ ಮಾಡಲಾಯಿತು.
ಕಲಬುರ್ಗಿ ವಿಭಾಗಿಯ ಶ್ರೀ ಕನಕ ಗುರು ಪೀಠದೀಶರಾದ ಶ್ರೀ ಸಿದ್ದರಾಮನಂದ ಸ್ವಾಮೀಜಿ ಮಾತನಾಡಿ ಮೂರು ದಿನಗಳ ನಡೆಯುವ ಕಾರ್ಯಕ್ರಮ ಕ್ಕೆ ಅನೇಕ ಮಠಾದೀಶರರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯವಾಗಿ ನೂರೆಂಟು ಪೂಜಾರಿಗಳು, ನೂರೆಂಟು ಗೊರವರು, ನೂರೆಂಟು ಈರಕಾರರು, ನೂರೆಂಟು ವಾರುಗಳು, ನೂರೆಂಟು ಡೊಳ್ಳು, ಪಲ್ಲಕ್ಕಿ ಯನ್ನು ಕೃಷ್ಣಾ ನದಿಯ ಪೂಜೆಯೊಂದಿಗೆ ಮೆರವಣಿಗೆ ಮೂಲಕ ಶ್ರೀ ಬೀರದೇವರಿಗೆ ಅರ್ಪಿಸಲಾಗುವದು ಎಂದರು.
ಅಲ್ಲದೆ ಸಮಾಜದ ಮುಖ್ಯವಾಹಿನಿಯಿಂದ ವಂಚಿತವಾಗಿರುವ ಸುಡಗಾಡು ಸಿದ್ದರು,ಟಗರು ಜೋಗಿಗಳು ಮತ್ತು ಹೆಳವರ ಸಮಾವೇಶ ವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಬೀರದೇವರ, ಶ್ರೀಬೊಮ್ಮಗೊಂಡೇಶ್ವರ ಮತ್ತು ಶ್ರೀಸಿದ್ದರಾಮೇಶ್ವರ ಉತ್ಸವ ಜರುಗಲಿದ್ದು ಈ ವೇಳೆ ವಿವಿದ ಕ್ಷೇತ್ರದಲ್ಲಿ ಸಾಧನೆಗೈಯದ ಮಹನಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು.ಕಾರ್ಯಕ್ರಮಕ್ಕೆ ರಾಜ್ಯದ ವಿವಿದ ಜಿಲ್ಲೆಗಳು ಸೇರಿ ಅಂತರ ಜಿಲ್ಲೆಯಿಂದ ಭಕ್ತರು ಆಗಮಿಸಲಿದ್ದಾರೆ ಎಂದು ಶ್ರೀ ಸಿದ್ದರಾಮನಂದ ಸ್ವಾಮಿಜಿ ವಿವಿರಿಸಿದರು.
ಈ ಸಂದರ್ಭ ಶ್ರೀ ಶಿವ ಸಿದ್ದೇಶ್ವರ ಸ್ವಾಮಿ,ಮುಖಂಡರಾದ ಶಿವಣ್ಣ ವಕೀಲ, ಶರಣಪ್ಪ ರೂಡಿಗಿ, ನಿವೃತ್ತ ಪ್ರಾಚಾರ್ಯರ ಬಿಜಿ.ಕರಿಗಾರ,ಶಿವಾನಂದ ನರಹಟ್ಟಿ, ಶರಣಯ್ಯ ಒಡೆಯರ್ ಇದ್ದರು.

Share and Enjoy !

Shares