ಮಸ್ಕಿ ಇಂಡಿಯನ್ ಪೆಟ್ರೋಲ್ ಬಂಕ್ ನ ಪರವಾನಗಿರದ್ದತಿಗೆ ಛಲವಾದಿ ಮಹಾಸಭಾ ಆಗ್ರಹ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಮಸ್ಕಿ : ಪಟ್ಟಣದಲ್ಲಿ ಪ್ರಕಾಶ್ ಧಾರಿವಾಳ ಒಡೆತನದ ಇಂಡಿಯನ್ ಪೆಟ್ರೋಲಿಯಂ ಮಸ್ಕಿ ಬಂಕ್ ನಲ್ಲಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದು ಹಗಲು ದರೋಡೆಗೆ ಇಳಿದಿರುವ ಬಂಕ್ ಮಾಲೀಕರು ಹಲವಾರು ದಿನಗಳಿಂದ ಇಂತಹ ದಂದೆ ನಡೆಯುತ್ತಲೇ ಇದೆ ,ಅದರಂತೆ ಇತ್ತೀಚಿಗೆ ಮತ್ತೆ ಅದು ಸಾಭಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ.
ಇಂದು ಪ್ರವಾಸ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಛ.ಮ ಸಭಾ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ ಮಸ್ಕಿಯ ಇಂಡಿಯನ್ ಪೆಟ್ರೋಲ್ ಬಂಕ್ ನಕಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡಿ ಸುದ್ದಿಯಲ್ಲಿದ್ದ ಮತ್ತೆ ಇತ್ತೀಚಿಗೆ ಡೀಸಲ್ ನಲ್ಲಿ ದೋಷ ಕಂಡುಬಂದಿಲ್ಲ ಆಗ ಸಾರ್ವಜನಿಕರು ಡೀಸಲ್ ದೋಷ ಇರಬಹುದು ನೋಡಿ ಎಂದಾಗ ಹಾಕಿರುವ ಡೀಸಲ್ ತೆಗೆದು ಬಾಟಲಿನಲ್ಲಿ ಸಂಗ್ರಹಿಸಿದ ನೋಡಿದಾಗ ಅದರಲ್ಲೂ ನೀರು! ಗಾಬರಿಗೊಂಡು ಇಂಡಿಯನ್ ಪೆಟ್ರೋಲಿಯಂ ಬಂಕ್ ಗೆ ಬಂದು ವಿಚಾರಿಸಿದಾಗ ಮಾತಿನ ಚಕಮಕಿ ನಡೆಯಿತು.
ಈಗೆ ಹಲವಾರು ಗ್ರಾಹಕರಿಗೆ ಮೊಸಮಾಡುತ್ತಿದ್ದಾರೆ
ಹತ್ತಾರು ಸಾವಿರ ರೂಗಳ ಬೆಲೆ ಬಾಳುವ ವಾಹನಗಳನ್ನು ನಾಶಗೊಳಿಸಿ ಜನರ ವಿಶ್ವಾಸಕ್ಕೆ ದಕ್ಕೆ ತರುವಂತಹ ಕೆಲಸ ಮಾಡಿದ್ದು ಅಂತವರ ಪರವಾನಗಿ ರದ್ದುಗೊಳಿಸಬೇಕು ಎಂದು ಛಲವಾದಿ ಮಹಾಸಭಾದ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ ಆಗ್ರಹಿಸಿದರು.

Share and Enjoy !

Shares