ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ : ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿಗೆ ತಾಲ್ಲೂಕಿನ ಸಂತೆಕಲ್ಲೂರು ಗ್ರಾಮದ ಪಂಡಿತ್ ಶ್ರೀ ವೇದಮೂರ್ತಿ ನಾಗಭೂಷಣ ಶಾಸ್ತ್ರಿಗಳು ಆಯ್ಕೆಯಾಗಿದ್ದಾರೆ.
ತಮ್ಮದೇ ಆದ ವೇದ ಪಾಂಡಿತ್ಯ ದಿಂದ ಹಲವಾರು ಮಠ ಮಾನ್ಯ ಗಳಲ್ಲಿ ಸೇವೆ ಸಲ್ಲಿಸಿ ಹೆಸರುವಾಸಿಯಾಗಿರುವ ಶಾಸ್ತ್ರಿ ಗಳು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು ನಮ್ಮ ಹಳ್ಳಿ ಪ್ರತಿಭೆ ರಾಜ್ಯದಲ್ಲಿ ಮಿಂಚುತ್ತಿದ್ದ ಇವರ ಕಾರ್ಯ ಸಾಧನೆ ಇನ್ನೂ ಉನ್ನತಿ ಸಾಧಿಸಲು ಎಂದು ಹಾರೈಸುತ್ತಾ,
ಜನವರಿ 16 ರಿಂದ 18 ರ ವರೆಗೆ ಬೆಂಗಳೂರುನ ವಿಜಯನಗರದಲ್ಲಿ ನೆಡಯವ ವೈದಿಕ ಚಾರಿಟೇಬಲ್ ಟ್ರಸ್ಟ್ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಪುರೋಹಿತ ಘಟಕ ಇವರ ಸಂಯುಕ್ತ ಆಶ್ರಯ ದಲ್ಲಿ ನೆಡಯವ ರಾಷ್ಟ್ರೀಯ ಮಟ್ಟದ ಕಾರ್ಯಗಾರದಲ್ಲಿ ಶ್ರೀ ಷ.ಬ್ರ.ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಮದ್ ವಿಭೂತಿಪುರ ವೀರ ಸಿಂಹಾಸನ ಸಂಸ್ಥಾನ ಮಠ ಬೆಂಗಳೂರು ಹಾಗೂ ಶ್ರೀ ಬಿ.ಎಸ್.ಯಡಿಯೂರಪ್ಪ ನವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು
ಬೆಂಗಳೂರಿನ
ವೈದಿಕ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾದ ಡಾ.ರಾಜಕುಮಾರ ಶಾ ಶಾಸ್ತ್ರಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು