ನೂತನ ಪಿಎಸ್ಐ “ಲಕ್ಕಪ್ಪ ಅಗ್ನಿ” ಅಧಿಕಾರ ಸ್ವೀಕಾರ

Share and Enjoy !

Shares
Listen to this article

ವಿಜಯನಗರವಾಣಿ

ಕೊಪ್ಪಳ ಜಿಲ್ಲೆ

ಕಾರಟಗಿ: ಪಟ್ಟಣ ಪೋಲಿಸ್ ಠಾಣೆಯ ನೂತನ ಸಬ್ ಇನ್ಸ್ಪೆಕ್ಟರ್ ರಾಗಿ ಎಲ್, ಅಗ್ನಿ ಮಂಗಳವಾರದಂದು ಅಧಿಕಾರ ಸ್ವೀಕರ ಮಾಡಿದರು.
ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾದ ಅಗ್ನಿ, ಪಿಎಸ್ಐಯಾಗಿ ರಾಯಚೂರು ಜಿಲ್ಲೆಯಲ್ಲಿ ಐದು ವರ್ಷ ಎಂಟು ತಿಂಗಳು ಕಾರ್ಯನಿರ್ವಹಿಸಿದ್ದಾರೆ.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದೇ ಮಾದಲ ಬಾರಿಗೆ ಕಾರಟಗಿ ಪೋಲಿಸ್ ಠಾಣೆಯ ಅಧಿಕಾರವನ್ನು ಸ್ವೀಕರಿಸಿದ್ದು ಸಾರ್ವಜನಿಕರ ಸಹಾಯ ಸಹಕಾರ ಬಹುಮುಖ್ಯವಾಗಿದೆ. ನಾನು ಸೋಮವಾರದಂದು ಅಧಿಕಾರ ಸ್ವೀಕರಿಸಬೇಕಿತ್ತು ನಾನಾ ಕಾರಣಗಳಿಂದ ಹಿನ್ನಡೆಯಾಯಿತು. ಆದಕಾರಣ ಮಂಗಳವಾರದಂದು ಅಧಿಕಾರ ಸ್ವೀಕರಿಸಿದ್ದೇನೆ. ಕಾರಟಗಿ ಪಟ್ಟಣದಲ್ಲಿ ಮಟ್ಕಾ, ಇಸ್ಪೀಟು, ಮರಳುನಂತ ಅನೇಕ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಬಂದಿದ್ದು ಅವುಗಳಿಗೆ ಕಡಿವಾಣ ಹಾಕುವ ಕಾರ್ಯವನ್ನು ಮಾಡುತ್ತೆವೆ. ಅಲ್ಲದೆ ಟ್ರಾಫಿಕ್ ನಿಂದ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದ್ದು ಅದನ್ನು ನಿಯಂತ್ರಿಸುವ ಕಾರ್ಯವು ಸಹ ನಡೆಯಲಿದೆ ಎಂದು ತಿಳಿಸಿದರು.

Share and Enjoy !

Shares