ವಿಜಯನಗರವಾಣಿ
ರಾಯಚೂರು ಜಿಲ್ಲೆ
ಮಸ್ಕಿ: 14ನೇ ಹಣಕಾಸು ಯೋಜನೆಯಡಿಯಲ್ಲಿ ಬರುವ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವಿರುದ್ಧ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಪಿಡಿಓ ಮಲ್ಲಿಕಾರ್ಜುನ ವಿರುದ್ಧ ಆರೋಪಿಸಿ ಕರ್ನಾಟಕ ಮಾಹಿತಿ ಆಯೋಗ ಆಯುಕ್ತರಿಗೆ ದೂರ ಸಲ್ಲಿಸಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತಿ ಪಿಡಿಒ 14ನೇ ಹಣಕಾಸು ಯೋಜನೆಯಡಿ ಬರುವ ಹಣವನ್ನು ಕಾಮಗಾರಿಗೆ ಹಣ ಬಳಕೆ ಮಾಡದೆ ಹಣವನ್ನು ನುಂಗಿ ನೀರು ಕುಡಿದಿದ್ದಾರೆಂದು ಆರೋಪಿಸಿ ಮತ್ತು ಅದರ ದೂರನ್ನು ಆಯುಕ್ತರಿಗೆ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ಕೆಲಸ ಆಗದೆ ಬಿಲ್ ಮಾಡಿಕೊಂಡಿದ್ದಾರೆ ಇದರ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಹಾಕಿದರು. ಇದುವರೆಗೂ ಉತ್ತರ ಕೊಡದೇ ಈ ಪಿಡಿಓ ಕೆಲ ರಾಜಕೀಯ ವ್ಯಕ್ತಿಗಳ ಕುಮ್ಮುಕಿನಿಂದ ಆನೆ ಸೊಕ್ಕಿನ ತರಹ ವರ್ತಿಸುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಆರೋಪಿಸಿ ಮನವಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯತಿ ಪಂಚಾಯತಿ ವ್ಯಾಪ್ತಿಯಲ್ಲಿ ಶೌಚಾಲಯ, ಎಸ್ಸಿ,ಎಸ್ಟಿ, ಮಕ್ಕಳಿಗೆ ಪ್ರತಿ ವರ್ಷ ಬುಕ್ಕುಗಳಿಗೆ ಸಹಾಯ ಧನದಲ್ಲಿ, ಮತ್ತು ಅನೇಕ ಶೌಚಾಲಯಗಳು ಆಯ ಸ್ಥಳಗಳಲ್ಲಿ ಇಲ್ಲದೆ ಬಿಲ್ ಗಳು ಮಾಡಿದ್ದಾರೆ. ಮತ್ತು ದನದ ಶೆಡ ಸೇರಿದಂತೆ ವಿವಿಧ ಕಾಮಗಾರಿಗಳು ಆಗದೆ ಬಿಲ್ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಹಾಕಿದರು ಪಿಡಿಒ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಸ್ಪಂದಿಸುತ್ತಿಲ್ಲ ಎಂದು ಪಿಡಿಒ ವಿರುದ್ಧ ದೂರಿದರು.
2017-21 ನೇ ಸಾಲಿನ 14 ನೇ ಹಣಕಾಸು ಯೋಜನೆಯಡಿ ಸಂಪೂರ್ಣ ವೆಚ್ಚದ ಕ್ರೀಯಾ ಯೋಜನೆ ತಯಾರಿಸಿದ್ದು, ಅದರಲ್ಲಿರುವಂತೆ ಕಾಮಗಾರಿಗಳು ನಡೆದಿಲ್ಲ. ಅಂದರೆ ಎಸ್ಟಿಮೇಟ್, ಎಂಬಿ ರೆಕಾರ್ಡ್ ಇಲ್ಲದೇ ಹಣ ದುರುಪಯೋಗ ಆಗಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಅದರ ವಿವರ ಕೊಡುವಂತೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.