ಯಶ್ ಹುಟ್ಟುಹಬ್ಬ ಅಂಗವಾಗಿ ಜ.8ರಂದು ಮಡಿಸ್ನಾನ,ಹೋಮ ಕಾರ್ಯಕ್ರಮ-ಕೊಪ್ಪರ

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು: ಯಶ್ ಜನ್ಮದಿನದ ಅಂಗವಾಗಿ ಜ.8 ರಂದು ತುಂಗಭದ್ರಾ ನದಿ ತೀರದಲ್ಲಿ ಮಡಿಸ್ನಾನ ಮತ್ತು ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಜಿಲ್ಲಾ ಗೌರವಾಧ್ಯಕ್ಷ ಶ್ರೀನಿವಾಸಕೊಪ್ಪರ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಜ.8ರಂದು ರಾಜ್ಯಾದ್ಯಂತ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ ಆಚರಣೆ ಕುರಿತು ಆಚರಣೆಯನ್ನು ಅಮ್ಮಿಕೊಂಡಿದ್ದು ದೇಶದಲ್ಲಿ ಕರೋನಾ ಸಂಕಷ್ಟ ಹಿನ್ನಲೆಯಲ್ಲಿ ಹುಟ್ಟುಹಬ್ಬವನ್ನು ಸರಳತೆ ಮತ್ತು ಕರೋನಾ -19 ಕೋವಿಡ್ ದೇಶಬಿಟ್ಟು ತೊಲಗಲಿ ಎಂಬ ವಿಚಾರವನ್ನು ಇಟ್ಟುಕೊಂಡು ತುಂಗಭದ್ರಾ ತೀರದಲ್ಲಿ ಮಡಿ ಸ್ನಾನ ಮಾಡಿ ಹೋಮ ಕಾರ್ಯಕ್ರಮವನ್ನು ಮಾಡುವುದರ ಮುಖಾಂತರ ಆಚರಿಸಿಲಾಗುವುದು, ಮಹಾಮಾರಿ ಕೋವಿಡ್-19 ನಿಂದ ಜನರು ತತ್ತರಿಸಿದ್ದು, ಇಂಥಾ ಸಮಯದಲ್ಲಿ ದೇಶದ ಜನರು ಈ ರೋಗದಿಂದ ಮುಕ್ತವಾಗಲು ಸಂಘದ ವತಿಯಿಂದ ಇಂಥಹ ಕಾರ್ಯಕ್ರಮಗಳ ಮೂಲಕ ಯಶ್ ರವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಅಭಿಮಾನಿಗಳು ಮಡಿಸ್ನಾನ ಮತ್ತು ಹೋಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.7ರಂದು ರಾತ್ರಿ ಸುಮಾರು 100 ಕ್ಕೂ ಹೆಚ್ಚು ಅಭಿಮಾನಿಗಳು ತಾಲೂಕಿನ ಗಿಲ್ಲೆಸೂಗೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ . ನಂತರ ಮರುದಿನ‌ ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಮುಳುಗಿ ಮಡಿಸ್ನಾನ ಮಾಡಿ ಹೋಮವನ್ನು ಮಾಡುವರು.
ಈ ಕಾರ್ಯಕ್ರಮಕ್ಕೆ ಡಾ. ರಾಜಕುಮಾರ, ವಿಷ್ಣುವರ್ಧನ್ ಮತ್ತು ಅಂಬರೀಷ್ ಅಭಿಮಾನಿಗಳು ಭಾಗವಹಿಸಲಿದ್ದಾರೆ . ಹಾಗೂ ಪ್ರಮುಖವಾಗಿ ಬಳ್ಳಾರಿಯ ನಮ್ಮ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎ.ರಾಮು, ಉಪಾಧ್ಯಕ್ಷ ರಾಜು ಪೂಜಾರಿ, ನಗರಾಧ್ಯಕ್ಷ ಅಂಬಾಜಿ ಗರಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares