ವಿಕಲಚೇತನರ ಸಮನ್ವಯ ಸಮಿತಿ ಸಭೆ ನಡೆಸಲು ಒತ್ತಾಯ

Share and Enjoy !

Shares
Listen to this article

 

ವಿಜಯನಗರ ವಾಣಿ

ರಾಯಚೂರು:ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ವಿಕಲಚೇತನ ಸಮನ್ವಯ ಗ್ರಾಮ ಸಭೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲ ಆರ್.ಡಿ.ಪಿ ಟಾಸ್ಕ್ ಫೋರ್ಸ್ ಅಂಗವಿಕಲತ ಸಂಘ ಸಂಸ್ಥೆಗಳ ಒಕ್ಕೂಟ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿವಾರ್ಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ದೇಶದಲ್ಲಿ ಕೋವಿಡ್ ಲಾಕ್ ಡೌನ್ ನಿಂದ ಸಾಮಾನ್ಯ ಜನತೆಯ ಸ್ಥಿತಿ ಚಿಂತಾಜನಕವಾಗಿದ್ದು, ಇದರಲ್ಲಿ ವಿಕಲಚೇತನರ ಇನ್ನೂ ಶೋಚನೀಯವಾಗಿದೆ. ಕೆಲವು ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಗ್ರಾಮ ಸಭೆಗಳನ್ನು ನಡೆಸಿರುವದನ್ನು ಸ್ವಾಗತಿಸುತ್ತೇವೆ. ಆದರೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವುದಿಲ್ಲ. ಆದ್ದರಿಂದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ಸ್ನೇಹಿ ಸಭೆಗಳು ನಡೆಯುತ್ತಿದ್ದು, ಅದರಂತೆ ವಿಕಲಚೇತನ ಸಮನ್ವಯ ಗ್ರಾಮ ಸಭೆಗಳು ನಡೆಯಬೇಕು ಎಂದು ಒತ್ತಾಯಿಸಿದರು.
ಸುತ್ತೋಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ವಿಕಲಚೇತನರ ಸಮನ್ವಯ ಸಭೆಗಳು ನಡೆಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ವೈದ್ಯಕೀಯ, ಸಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಿಷಯಗಳ ಕುರಿತು ಕ್ರೀಯಾಯೋಜನೆ ತಯಾರಿಸಿ ತಮ್ಮ ಗಮನಕ್ಕೆ ತರಬೇಕಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ್ ಪಿ.ಭಂಡಾರಿ, ವೀರ ಸಂಗಯ್ಯ ಹೀರೇಮಠ, ಅಸ್ಕಿಹಾಳ ನಾಗರಾಜ, ವೀರಭದ್ರಪ್ಪ ಗಜ್ಜಲಗಟ್ಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares