ಗಬ್ಬೂರು ಮಾಜಿ ತಾ.ಪಂ.ಸದಸ್ಯ ಜನಾರ್ಧನ ಸಿದ್ದರಾಮಯ್ಯ ಯುವ ಬ್ರಿಗೇಡ್ ದೇವದುರ್ಗತಾಲ್ಲೂಕು ಅಧ್ಯಕ್ಷರಾಗಿ ನೇಮಕ

Share and Enjoy !

Shares
  • ಗಬ್ಬೂರು: ಅಖಿಲ ಕರ್ನಾಟಕ ಸಿದ್ದರಾಮಯ್ಯ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಅಯ್ಯಪ್ಪ ಗಬ್ಬೂರು ರವರ ಆದೇಶದ ಮೇರೆಗೆ ದೇವದುರ್ಗ ತಾಲ್ಲೂಕು ಅಧ್ಯಕ್ಷರಾಗಿ ಜನಾರ್ಧನ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರು ಗಬ್ಬೂರು ಇವರನ್ನು ಆಯ್ಕೆ ಮಾಡಲಾಗಿದೆ. ಕ್ಷೇತ್ರದಲ್ಲಿ ಉತ್ತಮ ಆಡಳಿತ ನೀಡಿ ಹೆಸರು ವಾಸಿಯಾಗಿದ್ದರೆ.ಹುಟ್ಟಿನಿಂದ ಬಡವರ ನಿರ್ಗತಿಕರ ಕಷ್ಟ ನೋವು ನಲಿವುಗಳಿಗೆ ಸ್ಪಂದಿಸುವಂತ ಸಮಾಜ ಮುಖಿ ಜನಪರ ಸೇವೆಯನ್ನು ಗುರುತಿಸಿ ಸಿದ್ದರಾಮಯ್ಯ ಯುವ ಬ್ರೀಗೆಡ್ ದೇವದುರ್ಗ ತಾಲ್ಲೂಕು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು ಅಹಿಂದ ನಾಯಕರು ರವರ ಜನಪರ ಸೇವೆಗಳು ಹಾಗೂ ಕೆಳ ಮಟ್ಟದ ಜನರಿಗೆ ಸರಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಸಂಘಟನೆ ಮಾಡಿ ಜನರ ಸೇವೆ ಮಾಡಬೇಕೆಂದು ದೇವದುರ್ಗ ತಾಲ್ಲೂಕು ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿ ನೇಮಕ ಮಾಡಲಾಗಿದೆ.
    ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಶಿವು ಕರ್ಲಿ ಮಸೀದಪೂರ ಶಿವಣ್ಣ ಯಾದವ್ ,ತೋಹಿದ್ ಬೇಗ್,ಪ್ರಭು ಯಾದವ್ ಮಂಜುನಾಥ ಕರಿಗಾರ,ಚಿದಾನಂದ ಖಾನಪೂರ,ನರಸಣ್ಣ ಮಾನ್ವಿ,ದೇವರಾಜ ಹೊನ್ನಟಗಿ ಬಡದ್ ಬೂದೇಪ್ಪ ಹೊನ್ನಟಗಿ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares