೨೪x೭ ಕುಡಿವ ನೀರಿನ ಯೋಜನೆ, ಮಾವಿನ ಕೆರೆ ಆಧುನೀಕರಣ: ಶಾಸಕ ಡಾ.ಶಿವರಾಜ ಪಾಟೀಲ್.

Share and Enjoy !

Shares
Listen to this article

ರಾಯಚೂರು.ಜ.೧೦- ನಗರದ ೨೪x೭ ಕುಡಿವ ನೀರಿನ ಯೋಜನೆ, ಮಾವಿನ ಕೆರೆ ಆಧುನೀಕರಣ, ೫೪೪೦
ಮನೆ ಹಾಗೂ ಮಳೆ ನೀರು ಸಮಸ್ಯೆ ಶಾಶ್ವತ ಪರಿಹಾರ
ಮತ್ತು ವಿಮಾನ ನಿಲ್ದಾಣ ಯೋಜನೆಗಳನ್ನು ಶೀಘ್ರವೇ
ಅನುಷ್ಠಾನಗೊಳಿಸಲಾಗುತ್ತದೆಂದು ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ಕಾರ್ಯಕ್ರಮ ನಡೆಸಲಾಗುತ್ತದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ,
ನಗರದಲ್ಲಿ ೨೪x೭ ಕುಡಿವ ನೀರಿನ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಲಾಗಿದೆ. ತಕ್ಷಣವೇ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲು ಪ್ರತ್ಯೇಕ ವಿಭಾಗದ ಮೂಲಕ ಕಾರ್ಯಸೂಚಿ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಈ
ಯೋಜನೆ ಅನುಷ್ಠಾನಗೊಂಡರೇ, ನಗರದಲ್ಲಿ ಕುಡಿವ ನೀರಿನ ಶಾಶ್ವತ ಪರಿಹಾರಗೊಳ್ಳಲಿದೆ. ಒಳ ಚರಂಡಿ ಯೋಜನೆ ಕಾಮಗಾರಿಯೂ ಶೀಘ್ರ ಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಮಳೆಗಾಲದಲ್ಲಿ ತೆಗ್ಗು ಪ್ರದೇಶದ ಜನರಿಗೆ ನಿರಂತರ ಆಗುವ ಸಮಸ್ಯೆ ನಿವಾರಣೆಗೆ ೨ ಬೃಹತ್ ರಾಜಕಾಲುವೆ ಮೂಲಕ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಕಾಕಿ ಸೆರುವುನಿಂದ ಬರುವ ನೀರು ಏಗನೂರು ಭಾಗದತ್ತ ಮತ್ತು ನವೋದಯ ಕಾಲೇಜಿನಿಂದ ಬರುವ ನೀರು ಮಾವಿನ ಕೆರೆಯಲ್ಲಿ ಸಂಗ್ರಹಗೊಳ್ಳುವAತೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ನಗರದಲ್ಲಿ ವಸತಿ ರಹೀತರಿಗೆ ವಸತಿ ಸೌಕರ್ಯ ಕಲ್ಪಿಸುವ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ. ಒಟ್ಟು ೫೪೪೦ ಮನೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ೨೭೪೦ ಮನೆಗಳು ನೆಲ ಮಹಡಿ ಮತ್ತು ಮೇಲ್ಮಹಡಿ ನಿರ್ಮಿಸಲಾಗುತ್ತಿದ್ದೇ, ೨೭೦೦ ಮನೆಗಳನ್ನು ನೆಲ ಮಹಡಿ ಮಾತ್ರ ಸೀಮಿತವಾಗಿ ನಿರ್ಮಿಸಲಾಗುತ್ತದೆ. ಪರಿಶಿಷ್ಟ ಜಾತಿಗೆ ೨ ಲಕ್ಷ ಇತರರಿಗೆ ೪ ಲಕ್ಷ ವೆಚ್ಚದಲ್ಲಿ ಈ ಮನೆ ನೀಡಲಾಗುತ್ತದೆ.
ಫಲಾನುಭವಿಗಳು ಕಂತುಗಳಲ್ಲಿ ಹಣ ಪಾವತಿಸಬಹುದಾಗಿದೆ. ರಾಜ್ಯದಲ್ಲಿ ಮೂರನೇ ಅತಿ ಹೆಚ್ಚು ಕೊಳಚೆ ಪ್ರದೇಶ ಹೊಂದಿದ ಜಿಲ್ಲೆಯಲ್ಲಿ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗಿದೆ. ನಗರದಲ್ಲಿ ೪೨ ಕೊಳಚೆ ಪ್ರದೇಶಗಳಿದ್ದು, ಇಲ್ಲಿ ವಾಸಿಸುವವರಿಗೆ ಎಲ್ಲಾ ರೀತಿಯ ಅನುಕೂಲಕ್ಕಾಗಿ ಹಕ್ಕು ಪತ್ರ ವಿತರಿಸಲಾಗುತ್ತದೆ.
ಮಾವಿನ ಕೆರೆ ಸಮಗ್ರ ಅಭಿವೃದ್ಧಿಗೆ ಒಟ್ಟು ೨೨ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ೧೦ ಕೋಟಿ
ರೂ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಗೊಳಿಸಲಾಗಿದೆ. ಶೀಘ್ರವೇ ಮಾವಿನ ಕೆರೆ ನೀರು ಸಂಪೂರ್ಣ ಖಾಲಿ ಮಾಡಿ, ಇದನ್ನು ಮಾದರಿಯ ರೂಪದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಈ ಕಾಮಗಾರಿಯ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ನಿರ್ವಹಿಸಲಾಗುತ್ತದೆ. ವಿಮಾನ ನಿಲ್ದಾಣಕ್ಕಾಗಿ ೪೯ ಕೋಟಿ ಅನುದಾನ ನೀಡಲಾಗಿದ್ದು, ಆರ್ಥಿಕ ಇಲಾಖೆ ಇದಕ್ಕೆ ಅನುಮೋದನೆ ನೀಡಿದೆ. ರಸ್ತೆಗಳ ಅಭಿವೃದ್ಧಿ ವಿಷಯಕ್ಕೆ ಸಂಬAಧಿಸಿ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ೧೭ ವಾರ್ಡ್ಗಳಲ್ಲಿ ಕಾಮಗಾರಿ ಆರಂಭಗೊAಡಿದ್ದು, ಇನ್ನೂ ೧೩ ವಾರ್ಡಗಳಲ್ಲಿ ಕಾಮಗಾರಿ ಆರಂಭಗೊಳ್ಳಬೇಕಾಗಿದೆ. ನಗರದ
ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುತ್ತದೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎನ್.ಶಂಕ್ರಪ್ಪ, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ರಮಾನಂದ ಯಾದವ,
ಶಂಕರಗೌಡ, ದೊಡ್ಡ ಮಲ್ಲೇಶಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares