ವಿಜಯನಗರವಾಣಿ
ರಾಯಚೂರು.ಜ.11.ಕುರುಬ ಸಮಾಜವನ್ನು ಎಸ್.ಟಿ.ಮೀಸಲಾತಿ ಸೇರ್ಪಡೆ ಮಾಡಲು ಒತ್ತಾಯಿಸಿ ಜ.15 ರಂದು ಕಾಗಿನೆಲೆಯಿಂದ ಬೆಂಗಳೂರು ವರೆಗೆ ಪಾದಯಾತ್ರೆಯನ್ನು ಅಮ್ಮಿಕೊಳ್ಳಲಾಗಿದೆ ಎಂದು ಕುರುಬ ಎಸ್ ಟಿ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಡಿ. ನಾಗವೇಣಿ ಎಸ್.ಪಾಟೀಲ ಅವರು ಹೇಳಿದರು.
○ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ ಕುರುಬ ಎಸ್ ಟಿ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ಕುರುಬ ಸಮಾಜವನ್ನು ಎಸ್ ಟಿ ಪಂಗಡಕ್ಕೆಸೇರ್ಪಡೆ ಮಾಡಲು ಒತ್ತಾಯಿಸಿ ಜ.15 ರಂದು ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ಬೆಂಗಳೂರುವರೆಗೆ ಬೃಹತ್ ಪಾದಯಾತ್ರೆಯನ್ನು ಅಮ್ಮಿಕೊಳ್ಳಲಾಗಿದೆ,
○ಕಾರ್ಯಕ್ರಮದ ದಿವ್ಯಾ ಸಾನಿಧ್ಯವನ್ನು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠದ ಶ್ರೀಗಳದ ನಿರಂಜನಂದಾಪುರಿ ಮಹಾ ಸ್ವಾಮಿಗಳು ವಹಿಸಲಿದ್ದಾರೆ. ಪಾದಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆಎಸ್ ಈಶ್ವರಪ್ಪ,ಎಚ್ಎಂ ರೇವಣ್ಣ,ಬಂಡೆಪ್ಪ ಖಾಶಂಪುರ,ಕೆ.ವಿರುಪಾಕ್ಷಪ್ಪ,ಜಿವೇಶ್ವರಿ, ಕೆ.ಬಿ. ಶಾಂತಪ್ಪ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
○ಇದರಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು ಜಿಲ್ಲೆಯಿಂದ ಐದು ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್. ರಾಮು, ಗಂಗಪ್ಪ,ಚಂದ್ರವತಿ, ಲಕ್ಷ್ಮಿ ದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.