ನಗರಸಭಾಧ್ಯಕ್ಷ ರಾಜೀನಾಮೆ ನೀಡಲು ಒತ್ತಾಯಿಸಿ ಜ.18ರಂದು ಪ್ರತಿಭಟನೆ

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರ :ನಗರದ ತಿಂನ್ ಖಂದಿಲ್ ವೃತ್ತದಿಂದ ಅಶೋಕ್ ಡಿಪೋದವರಿಗೆ ರಸ್ತೆ ಅಗಲೀಕರಣ ಮತ್ತು ಸಿಸಿ ರಸ್ತೆ ನಿರ್ಮಾಣ ಮಾಡುವಲ್ಲಿ ನಗರಸಭೆ ಅಧ್ಯಕ್ಷರು ವಿಫಲವಾಗಿದ್ದು ಇವರು ಕೊಡಲೆ ರಾಜೀನಾಮೆ ನೀಡಲು ಒತ್ತಾಯಿಸಿ ನಗರ ಉಸ್ಮಾನಿಯ ತರಕಾರಿ ಮಾರಾಟಗಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜ.18ರಂದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಅಧ್ಯಕ್ಷರಾದ ಎನ್.ಮಹಾವೀರ್ ಅವರು ಹೇಳಿದರು.
ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ ತೀನ್ ಖಂದಿಲ್ ವೃತ್ತದಿಂದ ಅಶೋಕ್ ಡಿಪೋ ವೃತ್ತದ ಬಡಾವಣೆಯ ನಿವಾಸಿಗಳೊಂದಿಗೆ 2020 ನೆಯ ಡಿ.24ರಂದು ಸಭೆಯನ್ನು ಕರೆದು 50 ಫೀಟ್ ರಸ್ತೆಗಳು ಕಾರಣಕ್ಕೆ ಸೂಚನೆ ನೀಡಿದ ನಂತರ ಎರಡು ದಿನಗಳಲ್ಲಿ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳುವುದಾಗಿ ಹೇಳಿದ್ದರು.ಆದರೆ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ನಗರಸಭೆ ಹಣ ಪೋಲಾಗಬರದೆಂದು
ವಾಕಿ-ಟಾಕಿ ಖರೀದಿಯಲ್ಲಿ ಪಾರದರ್ಶಕತೆ, ನಗರದ ಸೌಂದರ್ಯಕರಣಕ್ಕೆ ಸಸಿಗಳನ್ನು ನೆಡುವುದು, ಬೀದಿ ನಾಯಿಗಳನ್ನು ಊರು ವರೆಗೆ ಬಿಟ್ಟು ಬರುವುದು ಬರುವುದು ವಾರ್ಡ್ ನಂ.34ರಲ್ಲಿ ಗುಂಡಿ ತುಂಬಿಸಲು ಇಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ ಆದರೆ ನಗರ ಕಾಮಗಾರಿಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ನಗರಸಭೆ ಅಧ್ಯಕ್ಷರ ತಂದೆಯವರಾದ ಈ.ಆಂಜನೇಯ್ಯ ನಗರ ಸೌಂದರ್ಯ ಕರಣಕ್ಕೆ 13000 ಸಸಿ ನೀಡಿದ್ದಾರೆ ಎಂದು ಹೇಳುತಿದ್ದರೆ. ಈ ಸಸಿ ನೆಡುವ ಕಾರ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ನಗರದಾದ್ಯಂತ ಆಸ್ವಚ್ಛತೆ ಎದ್ದು ಕಾಣುತ್ತಿದೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಗರಸಭೆ ಅಧ್ಯಕ್ಷರು ವಿಫಲರಾಗಿದ್ದು ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತ ಜ.18 ರಂದು ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹಮ್ಮದ್ ಷಾ ಖಾನ್, ಪ್ರಭು ನಾಯಕ್,ಕೆ.ವಿ.ಖಾಜಪ್ಪ,ಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Share and Enjoy !

Shares