ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು :ತಾಲ್ಲೂಕಿನ ಮುದಗಲ್ ಪಟ್ಟಣದ ನಗರಶ್ವರ ದೇವಸ್ಥಾನದಲ್ಲಿ
ಬಿಜೆಪಿ ಕಾರ್ಯಕರ್ತರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದರು ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ವಕೀಲರಾದ ಹರ್ಷ ಮುತಾಲಿಕ್ ಭಾಗವಹಿಸಿ ರಾಮಮಂದಿರ ನಿರ್ಮಾಣಕ್ಕೆ 490 ವರ್ಷದ ಹೋರಾಟದ ಫಲ
ರಾಮ ಮಂದಿರ ಕೇವಲ ಮಂದಿರ ಮಾತ್ರ ಅಲ್ಲ ಅದು ದೇಶದ ಜನರ ಭಾವನಾತ್ಮಕ ಸಂಬಂಧವಾಗಿದೆ, ನೂರಾರು ವರ್ಷದ ಕಾನೂನು ಹೋರಾಟ ಮಾಡಿ ಅನೇಕರ ಬಲಿದಾನ ನಂತರ ಮಂದಿರ ಕಟ್ಟುವ ಭಾಗ್ಯ ನಮಗೆ ದೊರಕಿದೆ ಇದೇ 15ರಿಂದ ಫೆ.5ರ ಅವಧಿಯಲ್ಲಿ ನಮ್ಮ ಕಾರ್ಯಕರ್ತರು ಪಟ್ಟಣದ ಎಲ್ಲ ಮನೆಗಳಿಗೂ ಭೇಟಿ ನೀಡಿ, ಯಾರನ್ನೂ ಒತ್ತಾಯಮಾಡಬೇಡಿ
ತಮ್ಮ ಯಥಾನುಶಕ್ತಿ ದೇಣಿಗೆಯನ್ನು ಕೇಳಿ ಎಂದರು. ನಂತರ ಲಿಂಗಸಗೂರು ತಾಲೂಕ ಅಧ್ಯಕ್ಷ ವೀರನಗೌಡ ಪಾಟೀಲ್ ಮಾತನಾಡಿದರು ಈ ಸಂದರ್ಭ ತಾಲೂಕ ಕಾರ್ಯ ನಿರ್ವಾಹ ಸೋಮುನಾಯಕ್ ,ಮಂಡಲ ಅಧ್ಯಕ್ಷ ಸಣ್ಣಸಿದ್ದಯ್ಯ ಸ್ವಾಮಿ, ನಾಮ ನಿರ್ದೇಶನ ಸದಸ್ಯ ಸಂತೋಷ ಸುರಪುರ, ಸಂಗಮೇಶ, ನವೀನ ಕುಮಾರ ಅಯ್ಯಪ್ಪಯ್ಯ ಸ್ವಾಮಿ, ಗದ್ದೆಪ್ಪ ಜಕ್ಕರಮಡು, ಶರಣಪ್ಪ ಹಂಚಿನಾಳ, ಮೆಹಬೂಬ್ ಸಾಬ ಡೋಂಗ್ರಿ, ಮೌನೇಶ ಕಟ್ಟಿಮನಿ, ಶರಣಪ್ಪ ಬನ್ನಿಗೋಳ,ಆದರ್ಶ ಸಜ್ಜನ, ಪರಶುರಾಮ ಭೋವಿ, ಅಮರೇಶ, ನರಸಿಂಹ, ಷಣ್ಮುಖ ಸಿಂಧೆ,ನೇತಾಜಿ,
ಹಾಗೂ ಇನ್ನಿತರರು ಇದ್ದರು.