ಕುರಿ ಮತ್ತು ಕುರಿ ಉತ್ಪನ್ನ ಮೇಳಕ್ಕೆ ಚಾಲನೆ

Share and Enjoy !

Shares
Listen to this article

 

ವಿಜಯನಗರವಾಣಿ
ರಾಯಚೂರು ಜಿಲ್ಲೆ

ದೇವದುರ್ಗ :ಕಾಗಿನೆಲೆ ಕನಕ ಗುರುಪೀಠ ದಲ್ಲಿ ಹಾಲುಮತ ಸಂಸ್ಕೃತಿ ವೈಭವ ಉತ್ಸವದಲ್ಲಿ ರಾಜ್ಯ ಕುರಿ ಅಭಿವೃದ್ಧಿ ನಿಗಮದ ವತಿಯಿಂದ ಏರ್ಪಡಿಸಲಾಗಿದ್ದ ವಿವಿದ ತಳಿಯ ಕುರಿ, ಮೇಕೆ ಹಾಗೂ ಕುರಿ ಉಣ್ಣೆ ಉತ್ಪನ್ನಗಳ ಮೇಳವನ್ನು ತಿಂಥಣಿ ಬ್ರಿಜ್ ಕಾಗಿನೆಲೆಯ ಕನಕ ಗುರು ಪೀಠದ ಶ್ರೀ ಸಿದ್ದರಾಮನಂದ ಸ್ವಾಮಿ ಗುರುವಾರ ಉದ್ಘಾಟಿಸಿದರು.
ಕುರಿಗಾರರಿಗೆ ಅಧಿಕ ಲಾಭ ಕಲ್ಪಿಸುವ ವೈಜ್ಞಾನಿಕ ಮಾದರಿಯ ಕುರಿ,ಮೇಕೆ ತಳಿಗಳ ಸಾಕಾಣಿಕೆ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅಲ್ಲದೆ ಕುರಿಯ ಉತ್ಪನ್ನವಾದ ಉಣ್ಣೆಯಿಂದ ತಯಾರಿಸಿದ ಕಂಬಳಿ,ಯೋಗ ಧ್ಯಾನ ಪೀಠ, ಟೋಪಿ,ಕೈ ಕಂಕಣಗಳು ಧಾರ್ಮಿಕ ಪವಿತ್ರವಾದ ಉತ್ಪನ್ನಗಳಾಗಿವೆ. ಇವುಗಳನ್ನು ಉಪಯೋಗಿಸುವ ದರಿಂದ ಮಾನಸಿಕ ಹಾಗೂ ದೈಹಿಕ ವಾಗಿ ನೆಮ್ಮದಿ ಸಿಗಲಿದೆ ಎಂದು ಸಿದ್ದರಾಮನಂದ ಸ್ವಾಮಿಗಳು ಹೇಳಿದರು.ಈ ಸಂದರ್ಭ ಕೊಪ್ಪಳದ ಬಾದಿನಾಳ ಶಾಖಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮಿ, ರಾಜ್ಯ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ,ಕುರಿ ಮತ್ತು ಮೇಕೆ ಸಾಕಣಿಕೆದಾರರ ಸಂಘಗಳ ಮಹಾಮಂಡಳದ ರಾಜ್ಯ ನಿರ್ದೇಶಕ ಶಾಂತಗೌಡ ನಾಗನಟಿಗಿ, ರಾಯಚೂರು ಕುರಿ ನಿಗಮದ ಸಹಾಯಕ ನಿರ್ದೇಶಕ ಯಮನಪ್ಪ ವಾಲ್ಮೀಕಿ, ಮುಖಂಡರಾದ ಶಿವಣ್ಣ ವಕೀಲ, ಶ್ರೀನಿವಾಸ, ರಾಮಣ್ಣ, ಹನುಮಂತ, ಸಾಬಣ್ಣ, ಬಸವರಾಜ,ಶರಣಯ್ಯ ಒಡೆಯರ್, ಪ್ರಭು, ಮಂಜುನಾಥ,ಮಾಳಪ್ಪ, ಶಿವಪ್ಪ ಕೋಟಿ ಸೇರಿದಂತೆ ಇನ್ನಿತರರು ಇದ್ದರು.

Share and Enjoy !

Shares