ಕೋರ್ಸ್ ಫುಡ್ ರಿಲೀಪ್ ಸಂಸ್ಥೆ:ಆಹಾರ ಕಿಟ್ ವಿತರಣೆ

ರಾಯಚೂರು:ಕೋವಿಡ್ ಸಂದರ್ಭದಲ್ಲಿ ಸಾಯಿ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಲಕ್ಷಾಂತರ ಜನರಿಗೆ ಉಚಿತವಾಗಿ ಆಹಾರ ಕಿಟ್ ಗಳನ್ನು ವಿತರಿಸಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಹೇಳಿದರು.ಅವರಿಂದು ಸಾಯಿ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಆಂಧ್ರ ಪ್ರದೇಶದ ಕೋರ್ಸ್ ಫುಡ್ ರಿಲೀಪ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಆಹಾರ ಕಿಟ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾಯಿ ಮಂದಿರದ ವತಿಯಿಂದ ಪ್ರತಿನಿತ್ಯ ಭಕ್ತಾದಿಗಳಿಗೂ ಬಡವರಿಗೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ, ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ ಮಾಡದಂತಹ ಕಾರ್ಯವನ್ನು ಈ ಸಾಯಿ ಸೇವಾ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ. ಇಂದು ಆಂಧ್ರಪ್ರದೇಶದ ಯಮಿಗಿನೂರು ನಗರದವರಿಂದ ಬಡವರಿಗೆ ಆಹಾರ ಕಿಟ್ ಗಳನ್ನು ವಿತರಿಸುತ್ತಿರುವುದು ಒಳ್ಳೆಯ ಸಂಗತಿ ಎಂದರು.

ಇತ್ತೀಚಿಗೆ ಮಳೆಯಿಂದಾಗಿ ನಗರದ ಜನರಿಗೆ ಸಾಕಷ್ಟು ತೊಂದರೆ ಉಂಟಾಗಿದ್ದು ಮನೆಗಳಿಗೆಲ್ಲ ನೀರು ಹೊಕ್ಕಿದವು ಸರ್ಕಾರದ ವತಿಯಿಂದ ನಗರದಲ್ಲಿ ವಾಸಿಸುವ ಕುಟುಂಬಗಳಿಗೆ 10 ಸಾವಿರ ನೀಡಲಾಗಿದ್ದು ಆದರೆ ಅದು ಕೇವಲ 3 ಸಾವಿರ ಕುಟುಂಬದವರಿಗೆ ಮಾತ್ರ ಬಂದಿದೆ ಎಲ್ಲ ಕುಟುಂಬಗಳಿಗೆ ಪರಿಹಾರ ದೊರಕಿಸಲು ನಾವು ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ನಂತರ ಕೋರ್ಸ್ ಫುಡ್ ರಿಲೀಸ್ ತಂಡದವರಿಂದ ಸುಮಾರು 100 ಜನರಿಗೆ ಆಹಾರ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಆಶೀರ್ವಾದ ಫೌಂಡೇಶನನ ಅಧ್ಯಕ್ಷ ಡಾ.ಬಸವನಗೌಡ ಪಾಟೀಲ್, ನಗರಸಭೆ ಪೌರಾಯುಕ್ತ ವೆಂಕಟೇಶ್,ಸಾಯಿ ಸೇವಾ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷ ಸಾಯಿ ಕಿರಣ್ ಅದೋನಿ, ಸುನಿಲ್, ಜಾನ್ ಕಿಷ್ಟಪರ್,ಡಿಗ್ರಿ ನರೇಶ್ ಸೇರಿದಂತೆ ದಂತೆ ಇನ್ನಿತರರು ಉಪಸ್ಥಿತರಿದ್ದರು

Share and Enjoy !

Shares