ವಿಜಯನಗರ ವಾಣಿ
ರಾಯಚೂರುಜಿಲ್ಲೆ
ಸಿಂಧನೂರು: ನಗರದ ರಾಯಚೂರು ರಸ್ತೆಯಲ್ಲಿರುವ ಸಂಗಮ್ ಪ್ಯಾಲೇಸ್ ನಲ್ಲಿ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಹಾಗೂ ಲಿಂಗಸೂಗೂರು ಸಹಾಯಕ ಆಯುಕ್ತರಾದ ರಾಜಶೇಖರ ಡಂಬಳ ಅವರು ವಿಜಯನಗರವಾಣಿ ಕನ್ನಡ ದಿನ ಪತ್ರಿಕೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಗೋಳಿಸಿದರು.
ಜಿಲ್ಲಾಧಿಕಾರಿಗಳಾದ ಆರ್.ವೆಂಕಟೇಶ್ ಕುಮಾರ ಮಾತನಾಡಿ ವಿಜಯನಗರವಾಣಿ ಕನ್ನಡ ದಿನ ಪತ್ರಿಕೆಯು
ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಾದ ಬಳ್ಳಾರಿ ,ರಾಯಚೂರು ,ಕೊಪ್ಪಳ ಜಿಲ್ಲೆಯಾದ್ಯಂತ ನೈಜ್ಯ ಸುದ್ದಿಗಳನ್ನು ಪ್ರಕಟಿಸುತ್ತಾ ಈ ಭಾಗದಲ್ಲಿ ಪತ್ರಿಕೋದ್ಯಮದಲ್ಲಿ ಮುನ್ನುಡೆಯುತ್ತಿರುವುದು ಸಂತೋಷಕರ ಸಂಗತಿ ಈ ಪತ್ರಿಕೆಯ ವರದಿಗಾರರು ಸಹ ಸಮಾಜ ಮುಖಿಯಾಗಿ ಸಮಾಜದ ಕಳಕಳಿಉಳ್ಳ ನೈಜ್ಯ ಸುದ್ದಿಗಳನ್ನು ಪ್ರಕಟಿಸುತ್ತಾ ಸಮಾಜ ಹಾಗೂ ಆಡಳಿತ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ವಾಣಿ
ವರದಿಗಾರ ವಿಜಯ ಕುಮಾರ ,ಜನತಾ ಟಿವಿ ವರದಿಗಾರ ಸೈಯದ್ ಬಂದೇನವಾಜ ,ರಾಯಚೂರು ಧ್ವನಿ ವರದಿಗಾರ ಲಕ್ಷ್ಮಣ್ ಕುರಕುಂದಾ ಪಾಲ್ಗೊಂಡಿದ್ದರು .