ಶೀಘ್ರವೆ ಗೌರವಧನ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ

Share and Enjoy !

Shares
Listen to this article

ರಾಯಚೂರು,ಜ.18- ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಆಶಾ ಕಾರ್ಯಕರ್ತೆಯರು ಅನೇಕ ಸೇವೆ ಸಲ್ಲಿಸಿದ್ದು ಈ ಕೆಲಸಕ್ಕೆ ಸರ್ಕಾರದಿಂದ ಯಾವುದೇ ಗೌರವಧನ ನೀಡಲಾಗಿಲ್ಲ, ಶೀಘ್ರವೆ ಗೌರವಧನ ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿತು.
ಇಂದು ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಗ್ರಾಮ ಪಂಚಾಯತ ಚುನಾವಣೆಗೆ ಸಂಬAಧಿಸಿದAತೆ, ನಾಮಪತ್ರ ಸಲ್ಲಿಕೆ, ವಿವಿಧ ತರಬೇತಿ, ಹಾಗೂ ಚುನಾವಣೆಯ ದಿನದಂದು ಥರ್ಮಲ್ ಸ್ಕಾö್ಯನಿಂಗ್, ಸ್ಯಾನಿಟೈಸ್ ಕೆಲಸಗಳಲ್ಲಿ ಆಶಾ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಲಾಗಿದೆ ಆದರೆ ಆ ಕರ್ತವ್ಯಕ್ಕೆ ಇದುವರೆಗೂ ಯಾವುದೇ ರೀತಿಯ ಗೌರವಧನ ನೀಡದಿರುವುದು ವಿಷಾಧನೀಯ ಸಂಗತಿ ಎಂದರು.
ಚುನಾವಣೆ ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು, ಎಷ್ಟೋ ಕಡೆ ಮದ್ಯಾಹ್ನದ ಊಟವೂ ನೀಡಲಾಗಿಲ್ಲ, ಪ್ರತಿಯೊಬ್ಬ ಆಶಾ ಕಾರ್ಯಕರ್ತೆಗೆ ಒಂದು ದಿನಕ್ಕೆ ರೂ.700 ನೀಡಬೇಕೆಂಬ ಆದೇಶವಿದ್ದು. ಸಂಬAಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಅವರಿಗೇನು ಗೊತ್ತೇ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದ್ದರಿಂದ ಚುನಾವಣೆ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಸಲ್ಲಬೇಕಾದ ಗೌರವಧನ ಕೂಡಲೇ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿರೇಶ ಎನ್.ಎಸ್, ತಾಲೂಕ ಗೌರವಾಧ್ಯಕ್ಷ ಮಹೇಶ ಚೀಕಲಪರ್ವಿ, ಜಿಲ್ಲಾ ಕಾರ್ಯದರ್ಶಿ ಈರಮ್ಮ, ತಾಲೂಕಾಧ್ಯಕ್ಷೆ ಲಕ್ಷಿö್ಮ ಸೇರಿದಂತೆ À ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Share and Enjoy !

Shares