ಕೊಪ್ಪಳ ಜಿಲ್ಲೆ
ಗಂಗಾವತಿ: ತಾಲೂಕು ಹಾಗು ನಗರ ಪ್ರದೇಶ ಸೇರಿದಂತೆ ನಾನಾ ಗ್ರಾಮಗಳ ಗೋದಾಮುಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಗುರುವಾರ ನಡೆಸಿದ್ದು, ದಾಳಿ ವೇಳೆಯಲ್ಲಿ ನಾಲ್ಕು ಲಾರಿ ಪ ಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ಕೆಲವರು ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಬೇರೆ ಕಡೆಗೆ ಅಧಿಕ ಲಾಭದ ಉದ್ದೇಶದಿಂದ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಪಡಿತರ ಅಕ್ಕಿ ಸರಿಯಾಗಿ ವಿತರಣೆಯಾಗುತ್ತಿಲ್ಲ ಎನ್ನುವ ದೂರಿನ ಮೇರೆಗೆ ಜಿಲ್ಲಾಧಿಕಾರಿಗಳು ಡಿಢೀರ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡವು ನಗರದ ಸಿಬಿಎಸ್ ಗಂಜ್, ದಾಸನಾಳ, ಶರಣ ಬಸವೇಶ್ವರ ಕ್ಯಾಂಪ , ವಿದ್ಯಾನಗರ ಸೇರಿದಂತೆ ನಾನಾ ಕಡೆಗಳಲ್ಲಿ ಇರುವ ಖಾಸಾಗಿ ಗೋದಾಮುಗಳಲ್ಲಿ ಹುಡಕಾಟ ನಡೆಸಲಾಗಿದೆ. ಸ್ವಂತ ಜಿಲ್ಲಾಧಿಕಾರಿಗಳೇ ಹುಡುಕಾಟ ನಡೆಸಿದ್ದು, ದಾಳಿ ವೇಳೆಯಲ್ಲಿ ಸಾಕಷ್ಟು ಪ್ರಮಾಣದ ಪಡಿತರ ಅಕ್ಕಿ ಸಿಕ್ಕಿ ಬಿದ್ದಿದೆ. ತಂಡದಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳನ್ನು ಹಾಕಿಕೊಳ್ಳದೆ ಸ್ಥಳೀಯ ಅಧಿಕಾರಿಗಳನ್ನು ದೂರ ಹಿಟ್ಟು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತಂಡ ಮಾಡಿಕೊಂಡು ದಾಳಿಯನ್ನು ನಡೆಸಿದ್ದಾರೆ. ಅಕ್ರಮ ಅಕ್ಕಿ ಸಾಗಾಟದಾರರ ಕಣ್ಣು ತಪ್ಪಿಸಿ ದಾಳಿ ನಡೆಸುತ್ತಿರುವ ಅಧಿಕಾರಿಗಳು ಸಂಜೆವರೆಗೂ ದಾಳಿಯನ್ನು ಮುಂದುವರೆಸಿ, ಹುಡುಕಾಟ ನಡೆಸಿದ್ದರು.
4 ಲಾರಿ ಅಕ್ಕಿ ವಶ: ಸರಿ ಸುಮಾರು 4 ಗಂಟೆಗೂ ಅಧಿಕ ಹುಡುಕಾಟ ನಡೆಸಿದ ಅಧಿಕಾರಿಗಳು ದಾಳಿ ವೇಳೇಯಲ್ಲಿ ಪಡಿತರ ಅಕ್ಕಿಯನ್ನು ತುಂಬಿರುವ ಒಟ್ಟು 4 ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಂತರ ಭೇಟಿ ನೀಡಿ , ಪಂಚನಾಮ ನಡೆಸಿ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿ ವಿಕಾಸ್ ಸುರಳ್ಕರ್, ಸಹಾಯಕ ಆಯುಕ್ತರು ನಾರಾಯಣರೆಡ್ಡಿ ಕನಕರೆಡ್ಡಿ, ಪ್ರಭಾರಿ ತಹಸೀಲ್ದಾರ ವಣೀ೯ತ್ ನೇಗಿ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀಧರ ಹಾಗೂ ಇತರರಿದ್ದರು.