ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು :ತಾಲ್ಲೂಕಿನ ಮುದಗಲ್ ವಿಜಯವಾಣಿ ಪತ್ರಿಕೆಯ ಪತ್ರಕರ್ತ ಹಾಗೂ ಸಾಹಿತಿ ಶರಣಯ್ಯ ಬಿ.ಒಡೆಯರ್ ಬಅಯ್ಕೆ ಆಗಿದ್ದಾರೆ.
ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದಿಂದ ಇದೆ ಜನವರಿ ೩೧ ರಂದು ಬೆಂಗಳೂರಿನ ಮಲ್ಲೇಶ್ವರಂದ ಚೌಡಯ್ಯ ಮೆಮೊರಿಯಲ್ ಹಾಲ್ ದಲ್ಲಿ ಜರುಗುವ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಕನ್ನಡ ಸಾಹಿತ್ಯ ಪರಿಷತ್ ನ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಮಾಯಣ್ಣ ತಿಳಿಸಿದ್ದಾರೆ.
ಅಭಿನಂದನೆ: ಕಳೆದ ಇಪ್ಪತ್ತು ವರ್ಷಗಳಿಂದ ಪತ್ರಕರ್ತರಾಗಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಶರಣಯ್ಯ ಬಿ.ಒಡೆಯರ್ ರವರಿಗೆ “೨೦೨೧ ನೇ ಸಾಲಿನ “ಕನ್ನಡ ಸೇವಾ ರತ್ನ” ಪ್ರಶಸ್ತಿ ಲಬಿಸಿರುವುದಕ್ಕೆ ಪತ್ರಕರ್ತರಾದ ಶಿವಕುಮಾರ ನಾಗರನವಿಲೆ, ಡಾ.ಎಂಎಸ್.ಮಣಿ, ಡಾ.ಶ್ರೀನಿವಾಸ ಮಿಂಚು, ರಾಜ್ಯ ಗ್ರಂಥಾಲಯ ಗ್ರಂಥ ಆಯ್ಕೆ ಸಮಿತಿ ಸದಸ್ಯ ಮಂಜುನಾಥ ಬೊಮ್ಮನಕಟ್ಟಿ, ಸ್ಥಳಿಯ ಪತ್ರಕರ್ತರಾದ ಬಿಎ.ನಂದಿಕೋಲ ಮಠ, ಖಾಜಾಹುಸೇನ್,ಹನುಮಂತ ಕನ್ನಾಳ, ಪಂಪಾಪತಿ, ಬಸಲಿಂಗಪ್ಪ, ಹನುಮಂತ ಎಂ.ನಾಯಕ, ದೇವಪ್ಪ ರಾಠೋಡ್, ಶಶಿಧರ ಕಂಚಿಮಠ, ನಾಗರಾಜ ಮಡಿವಾಳರ, ಬಸವರಾಜ ಆಶಿಹಾಳ,ದುರಗಪ್ಪ,ಬಸವರಾಜ ಗುರುಗುಂಟ,ಅಮರೇಶ ಬಲ್ಲಟಗಿ,ವಾಹಿದ್ ಖುರೇಶಿ ಸೇರಿದಂತೆ ಎಲ್ಲಾ ಪತ್ರಕರ್ತ ಸ್ನೇಹಿತರು ಅಭಿನಂದಿಸಿದ್ದಾರೆ.