ತಲೆಕೆಳಗಾಗಿ ಹಾರಾಡಿದ ರಾಷ್ಟ್ರ ಧ್ವಜ

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸೂಗೂರು:ತಾಲ್ಲೂಕಿನ ಮುದಗಲ್ಲಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಗೂ ಬಾಲಕರ ಪ್ರೌಢ ಶಾಲೆಯಲ್ಲಿ ಮಂಗಳವಾರ ನೆಡೆದ ಗಣರಾಜ್ಯೋತ್ಸವದಂದು ರಾಷ್ಟ್ರ ಧ್ವಜ ತಲೆ ಕೆಳಗಾಗಿ ಹಾರಾಡಿದ ಘಟನೆ ಜರುಗಿದೆ. 72ನೇ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ಹಾಗೂ ಅದೇ ಆವರಣದಲ್ಲಿ ಇರುವ ಪ್ರೌಢ ಶಾಲೆ ಮುಂಭಾಗದ ಧ್ವಜ ಸ್ಥಂಭದಲ್ಲಿ ಶಿಕ್ಷಕರ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿ ತನದಿಂದಾಗಿ ರಾಷ್ಟ್ರ ಧ್ವಜಕ್ಕೆ ಅಪಮಾನ ಜರುಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲೇಜ್ ಮುಂಭಾಗದಲ್ಲಿ ಪ್ರಾಚಾರ್ಯ ಸುಜಾತ್ ಪಾಟೀಲ್, ಪ್ರೌಢ ಶಾಲೆಯಲ್ಲಿ ಡಿ.ಕೆ ಪೂಜಾರಿ ಧ್ವಜ ರೊಹಣ ವೇಳೆ ಹಸಿರು ಬಣ್ಣ ಮೇಲ್ಮುಖ ವಾಗಿ ಧ್ವಜ ರೊಹಣ ಮಾಡಿ ರಾಷ್ಟ್ರಗೀತೆ ಹಾಡಲು ಶುರು ಮಾಡಿದರು. ಆದರೆ ಕೆಲವರು ಅದನ್ನು ಗಮನಿಸಿ ಧ್ವಜ ರೊಹಣ ಉಲ್ಟಾ ಆಗಿದನ್ನು ಗಮನ ಸೇಳೆದರು ಇದರಿಂದ ಎಚ್ಚೆತ್ತ ಕೊಂಡು ಧ್ವಜ ಕೆಳಗೆ ಇಳಿಸಿ ಪುನ ಮೇಲೆ ಏರಿಸಿದರು. ಇದರಿಂದ ನೆರೆದಿದ್ದ ಜನ ಪ್ರಾಚಾರ್ಯ ಸುಜಾತ್ ಪಾಟೀಲ್, ಮತ್ತು ಡಿ.ಕೆ.ಪುಜಾರಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಅಭಿಪ್ರಾಯ: ಧ್ವಜ ಉಲ್ಟಾ ಆಗಿ ಹಾರಾಡಿದ್ದು ನಿಜ, ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ. ನಮ್ಮ ತಪ್ಪುಗೆ ನಾವು ಅನುಭವಿಸಬೇಕು- ಪ್ರಾಚಾರ್ಯ ಸುಜಾತ್ ಪಾಟೀಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಮುದಗಲ್,

ಅಭಿಪ್ರಾಯ: ನಮ್ಮ ದೈಹಿಕ ಶಿಕ್ಷಕರೊಂದಿಗೆ ಧ್ವಜ ಕಟ್ಟಲಾಗಿತ್ತು. ಧ್ವಜ ಏರಿದ ಮೇಲೆ ಉಲ್ಟಾ ಆಗಿದ್ದು ಗಮನಕ್ಕೆ ಬಂತು ಸರಿ ಪಡಿಸಿದ್ದೇವೆ- ಮುಖ್ಯ ಗುರು ಡಿ.ಕೆ.ಪೂಜಾರಿ ಬಾಲಕರ ಪ್ರೌಢ ಶಾಲೆ ಮುದಗಲ್.

ಅಭಿಪ್ರಾಯ: 72ನೇ ಗಣರಾಜ್ಯೋತ್ಸವದ ದಂದು ಮುದಗಲ್ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಧ್ವಜ ಉಲ್ಟಾ ಆಗಿ ಹಾರಾಡಿದ್ದು ಗಮನಕ್ಕೆ ಬಂದಿದೆ. ಈ ಬಗ್ಗೆ ಮಾಧ್ಯಮ ವರದಿ ಬಂತ ನಂತರ ನಾನು ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹುಂಬಣ್ಣ ರಾಠೋಡ್ ಬಿ ಇ ಓ ಲಿಂಗಸೂಗೂರು

Share and Enjoy !

Shares