ಲಿಂಗಸೂಗೂರು :ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾನೂನು ಚೌಕಟ್ಟಿನಲ್ಲಿ ರಾಷ್ಟ್ರ ಮುನ್ನೆಡೆಸಬೇಕೆಂಬ ಸದುದ್ದೇಶದಿಂದ ಡಾ. ಬಾಬಾಸಾಹೇಬ ಅಂvಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚಿಸಿ, ಜನೇವರಿ 26, 1950 ರಂದು ಜಾರಿಗೆ ತರಲಾಯಿತು. ಆ ಸಂವಿಧಾನ ಜಾರಿಗೆ ಬಂದ ಸವಿನೆನಪಿಗಾಗಿ ಪ್ರತಿ ವರ್ಷ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ಪ್ರಾಚಾರ್ಯ ಬಸವರಾಜ ವೈ ಹೇಳಿದರು
ಶ್ರೀ ಸಂಗಮೇಶ್ವರ ಪದವಿ ಮಹಾದ್ಯಾಲಯದಲ್ಲಿ ಹಮ್ಮಿಕೊಂಡ 72ನೇ ಗಣರಾಜ್ಯೋತ್ಸದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಕಾನೂನಿಗೆ, ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಶಿಕಾಂತ, ಶ್ರೀಮತಿ ಶಾಂತಮ್ಮ, ಬಸವರಾಜ ಖೈರವಾಡಗಿ, ಭೀಮಸಿಂಗ್ ನಾಯ್ಕ್, ನಿರುಪಾದಿ, ಅಕ್ಷತಾ, ಮಂಜುನಾಥ ಉಸ್ಕಿಹಾಳ, ಅನಿಲಕುಮಾರ ಮಿಶ್ರಾ, ಪ್ರವೀಣಕುಮಾರ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು..