ನಾಗರಾಳ ಪದವಿ ಪೂರ್ವ ಕಾಲೇಜನ 6 ನೂತನ ಕೊಠಡಿಗಳ ಉದ್ಘಾಟನೆ

Share and Enjoy !

Shares
Listen to this article

ವಿಜಯನಗರವಾಣಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :ತಾಲ್ಲೂಕಿನ ಮುದಗಲ್ ಪಟ್ಟಣ ಸಮೀಪದ ನಾಗರಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮುದಗಲ್ ಪಟ್ಟಣದ ಸಮೀಪದ ನಾಗರಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಸರ್ಕಾರಿ ಪದವಿ ಪೂರ್ವ ಕಾಲೇಜು 6 ಕೊಠಡಿಗಳನ್ನು ಲಿಂಗಸೂರ ಶಾಸಕ ಡಿಎಸ್ ಹುಲಗೇರಿ ಉದ್ಘಾಟಿಸಿದರು . ಜಿಲ್ಲಾಡಳಿತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಯಚೂರು ಸಹಯೋಗದಲ್ಲಿ 2018-19 ನೇ ಸಾಲಿನ ನಬಾರ್ಡ ಆರ್.ಐ.ಡಿ.ಎಫ್ -24 ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ನೂತನ ಆರು ಕೊಠಡಿಗಳನ್ನು ಉದ್ಘಾಟನೆ ಮಾಡಿದ ನಂತರ ಮಾತಾಡಿದರು . ಮಕ್ಕಳಿಗೆ ಮೊದಲು ಉತ್ತಮ ಶಿಕ್ಷಣ ನೀಡಿ ನಿಮ್ಮ ಶಾಲೆ ಕಾಲೇಜ್ ಗಳಿಗೆ ಏನು ಸೌಕರ್ಯ ಬೇಕು ಆ ಸೌಕರ್ಯ ನೀಡುವ ಕೆಲಸ ನಮ್ಮದು ನಮ್ಮ ಕ್ಷೇತ್ರಗಳಲ್ಲಿ ಕುಡಿಯುವ ನೀರು , ಗ್ರಾಮಕ್ಕೆ ಬೇಕಾದ ಸೌಕರ್ಯ ನೀಡುವಲ್ಲಿ ನಾವು ಮುಂದೆ ಎಂದು ಹೇಳಿದರು . ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೌವೂದ್ ಸಾಬ , ಹೊನ್ನಪ್ಪ ಮೇಟಿ , ರುದ್ರಗೌಡ ತುರಡಗಿ , ಪಿಡಿಓ ಸೋಮನಗೌಡ , ಬಸವರಾಜ ತುರಡಗಿ , ಆಪ್ತ ಸಹಾಯಕ ಶರಣು ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು .

Share and Enjoy !

Shares