ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು :ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿಂದ ಕಳ್ಳತನ ಮೂಲಕ ತಂದಿದ್ದ ಮೂರು ಲಕ್ಷ ಮೌಲ್ಯದ ಟ್ರ್ಯಾಕ್ಟರ್ ನ್ನು ಲಿಂಗಸುಗೂರು ಪೊಲೀಸರು ಜಪ್ತಿ ಮಾಡಿ ಅರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಮುದ್ದೆಬಿಹಾಳ ತಾಲ್ಲೂಕಿನ ಆರ್ಯಶಂಕರ್ ಗ್ರಾಮದ
ಆರೋಪಿ ಅಮರೇಶ ಬಸವರಾಜ ಈಚನಾಳ ಅವರನ್ನು ಈಚನಾಳ ಬಳಿ ವಿಚಾರಣೆ ನಡೆಸಿದಾಗ ಬಲವಾದ ಸಂಶಯ ಕಂಡು ಬಂದಿದ್ದರಿಂದ ವಿಚಾರಣೆ ನಡೆಸಿ ಕಳ್ಳತನ ಪ್ರಕರಣ ದಾಖಲಿಸಲಾಗಿದೆ.
ಸೋನಾಲಿಕ ಎಂಜಿನ್ ಕೆ.ಎ- ೧೬ ಟಿ.ಎ- ೨೫೩೯ ಮತ್ತು ಟ್ರ್ಯಾಲಿ ಕೆ.ಎ-೨೩ ಟಿ.ಬಿ ೨೦೩೮ ಅಂದಾಜು ರೂ. ಮೂರು ಲಕ್ಷ. ಮಾಲೀಕರು ಯಾರು ಎಂಬುದರ ವಿಚಾರಣೆ ನಡೆದಿದೆ ಎಂದು ಡಿವೈಎಸ್ಪಿ ಎಸ್.ಎಸ್ ಹುಲ್ಲೂರು ತಿಳಿಸಿದ್ದಾರೆ.