ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ : ಎಸ್ ಎಸ್ ಹುಲ್ಲೂರು

ವಿಜಯನಗರವಾಣಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಜನರು ಸಾವನಪ್ಪಿದ್ದು ವಾಹನ ಸವಾರರು ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಲಿಂಗಸುಗೂರು ಡಿವೈಎಸ್ಪಿ ಎಸ್ ಎಸ್ ಹುಲ್ಲೂರು ಹೇಳಿದರು
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು..
ಪಿ.ಎಸ್ ಐ ಡಾಕೇಶ ಉಪ್ಪಾರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಹೆಲ್ಮೆಟ ಧರಿಸಿ ಬೈಕ್ ರ್ಯಾಲಿ ಮಾಡಿ ಜಾಗೃತಿ ಮೂಡಿಸಿದರು
ಇದೆ ಸಂದರ್ಭದಲ್ಲಿ ಸಿಪಿಐ ದೀಪಕ್ ಭೂಸರೆಡ್ಡಿ. ಮೈಹಿಬೂಬಸಾಬ ಬಾರಿಗಿಡ ಗುರುಬಸಪ್ಪ ಸಜ್ಜನ. ಸಿಬ್ಬಂದಿ ಮಹಾಂತೇಶ. ಭೀಮದಾಸ. ಬಾಷಾಸಾಬ ಪೋತ್ನಾಳ. ರುದ್ರಗೌಡ. ಶ್ರೀಧರ . ಆಡಿವೆಪ್ಪ. ಶಿವನಗೌಡ ಮಂಜುನಾಥ. ಸೇರಿದಂತೆ ಮುಂತಾದರು ಹಾಜರಿದ್ದರು

Share and Enjoy !

Shares