ಆಹಾರ ಇಲಾಖೆ ಉಪನಿರ್ದೇಶಕರ ಅಮಾನತಿಗೆ ಆಗ್ರಹ ಒತ್ತಾಯ

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು:ಆಹಾರ ಇಲಾಖೆಯ ಪಡಿತರ ಬೆಳೆ ನೀಡುವಲ್ಲಿ ಬಾರಿ ಭ್ರಷ್ಟಾಚಾರವನ್ನು ನಡೆಸಿದ ಉಪ ನಿರ್ದೇಶಕ ಅರುಣ್ ಕುಮಾರ್ ಸಂಗವಿ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಆರ್ ಟಿ ಐ ಕಾರ್ಯಕರ್ತ ಮೈತ್ರಿಕರ್ ಅವರು ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಆಹಾರ ಇಲಾಖೆಯಲ್ಲಿ 2019 ರ ಜೂನ್-ಜುಲೈ ತಿಂಗಳಿನಲ್ಲಿ 7474 ಕ್ವಿಂಟಲ್ ಬೆಳೆಯು ಇಲಾಖೆಯಿಂದ ಬಂದಿದ್ದು, ಆದರೆ ಉಪನಿರ್ದೇಶಕ ಅರುಣ ಕುಮಾರ್ ಸಂಗವಿ ಅವರು ಯಾವುದೇ ನ್ಯಾಯಬೆಲೆ ಅಂಗಡಿಗೆ ನೀಡದೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಆಹಾರ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿ ಒಂದು ತಂಡವನ್ನು ರಚಿಸಿ ಇದರ ಬಗ್ಗೆ ಕಾರ್ಯಚರಣೆ ಮಾಡಲು ಮನವಿ ಸಲ್ಲಿಸಿದ್ದೇನೆ.
ಆಹಾರ ಇಲಾಖೆ ಆಯುಕ್ತರು ನ್ಯಾಯಬೆಲೆ ಅಂಗಡಿಯವರು,ಪಡಿತರರು ಯಾವುದೇ ದೂರು ನೀಡಿಲ್ಲ ಎಂದು ನಮಗೆ ತಿಳಿಸಿದ್ದಾರೆ ಆದರೆ ಆಹಾರ ಇಲಾಖೆ ಉಪನಿರ್ದೇಶಕರು ದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.
ಬೆಳೆ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದ್ದು ಈ ಕುರಿತು ಇತ್ತೀಚೆಗೆ ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಕೆ. ರಾಮೇಶ್ವರಪ್ಪ ಅವರನ್ನು ಈ ಕುರಿತು ಕರಣೆ ಮಾಡಲು ಸರ್ಕಾರ ಸೂಚಿಸಿರುತ್ತದೆ. ಬೇಳೆ ವಿತರಿಸುವ ಸಂದರ್ಭದಲ್ಲಿ ಕೇವಲ ಉಪನಿರ್ದೇಶಕರು ಮಾತ್ರವಲ್ಲದೆ ಅಧಿಕಾರಿಯಾಗಿರುತ್ತಾರೆ ಎಂದು ಹೇಳಿದರು.
ಆದಕಾರಣ ಕೂಡಲೇ ಆಹಾರ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ ಸಂಗವಿ ಮತ್ತು ಆಹಾರ ಅಧಿಕಾರಿ ಅವರನ್ನು ಕೂಡಲೇ ಅಮಾನತ್ತು ಮಾಡಿ 7474 ಕ್ವಿಂಟಲ್ ಬೇಳೆಯ ಮೊತ್ತವನ್ನು ಸರ್ಕಾರಕ್ಕೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ.ಆರ್.ಬೇರಿ, ಶರಣಪ್ಪ ದಿನ್ನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Share and Enjoy !

Shares