ವಿಜಯನಗರವಾಣಿ
ಬಳ್ಳಾರಿ :ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿಯ
ಸಂಸ್ಥಾಪಕ ಅಧ್ಯಕ್ಷ ಪಿ.ಎಂ.ಈಶ್ವರಪ್ಪ ಇವರ ಆದೇಶದ ಮೇರೆಗೆ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಶ್ರೀರಾಮುಲು ಅವರು ಸಮಿತಿಯ ಜಿಲ್ಲಾ ಅಧ್ಯಕ್ಷರನ್ನಾಗಿರಮೇಶ್ ಕುಮಾರ್ ಉಪ್ಪಾರನ್ನು ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತಾವು ಕನ್ನಡದ ನಾಡು-ನುಡಿ, ನೆಲ-ಜಲ, ಸಂಸ್ಕೃತಿ, ರೈತ-ಕಾರ್ಮಿಕ, ವಿಧ್ಯಾರ್ಥಿ, ಯುವ ಜನರ ಹಾಗೂ ಮಹಿಳೆಯರ ರಕ್ಷಣೆಯು ಒಳಗೊಡಂತೆ ನಾಡಿನ ಸರ್ವತೋಮುಖ ಬೆಳವಣಿಗೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ ನಡೆಸುವ ರಾಜ ರಹಿತ ಹಾಗೂ ರಾಜಕೀಯರಹಿತ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ವೇದಿಕೆಯ ತತ್ವಸಿದ್ಧಾಂತಗಳಿಗೆ ಬದ್ಧವಾಗಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವ ಅಚಲ ನಿರ್ಧಾರದಲ್ಲಿ ನಂಬಿಕೆಯಿಟ್ಟು ಕಾನೂನಿನ ಚೌಕಟ್ಟನಲ್ಲಿ ನಾಡ ಸೇವೆಗೆ ಶಕ್ತಿಮೀರಿ ಕಟಿ ಬದ್ಧವಾಗಿ ದುಡಿಯಬೇಕೆಂದು ಆಶಿಸಿದ್ದಾರೆ.
ಅಲ್ಲದೆ ಸಂಘಕ್ಕೆ ಧಕ್ಕೆ ಬರುವ ವಿಚಾರದ ಕೃತ್ಯಗಳಲ್ಲಿ ಪಾಲ್ಗೊಂಡಲ್ಲಿ ಆ ಕ್ಷಣದಿಂದಲೇ ಸಂಘಟನೆ ತಮ್ಮಪದವಿಯನ್ನು ರದ್ದುಗೊಳಿಸಲಾಗುವುದು ಎಂದಿದ್ದಾರೆ.
ನೇಮಕದ ಆದೇಶವನ್ನು ಸಂಘಟನೆಯ
ಸಂಸ್ಥಾಪಕ ಅಧ್ಯಕ್ಷ ಪಿ.ಎಂ.ಈಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಯು.ಶ್ರೀರಾಮುಲು ವಿತರಿಸಿದರು. ಈ ಸಂದರ್ಭದಲ್ಲಿ ಕೆ.ಈಶ್ವರ್, ನರೇಶ್ ಬಾಬು, ಪ್ರಸಾದ್, ಭಾಸ್ಕರ್, ಜಯರಾಮ್, ಶಿವರಾಜ್, ಕೋಟೇಶ್ವರ್ ಮೊದಲಾದವರು ಇದ್ದರು.