ಕಾರ್ಮಿಕರಿಗೆ ಮೂಲಭೂತ ಸೌಕರ್ಯ ನೀಡಲು ಒತ್ತಾಯ-ಭಾಸ್ಕರ್ ಬಾಬು

Share and Enjoy !

Shares
Listen to this article

ರಾಯಚೂರು:ಸ್ವತಂತ್ರ ಬಂದು 75 ವರ್ಷಗಳು ಕಳೆದರು ಕಾರ್ಮಿಕರು ಬದಲಾಗುತ್ತಿಲ್ಲ ಸಂವಿಧಾನದಲ್ಲಿರುವ ಹಕ್ಕುಗಳನ್ನು ಕಾರ್ಮಿಕರಿಗೆ ನೀಡುತ್ತಿಲ್ಲವೆಂದು ಕಾರ್ಮಿಕ ಅವುಗಳ ವೇದಿಕೆ ರಾಷ್ಟ್ರೀಯ ಸದಸ್ಯರಾದ ಭಾಸ್ಕರ್ ಬಾಬು ಅವರು ಹೇಳಿದರು.ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ದೇಶಕ್ಕೆ ಸ್ವಾತಂತ್ರ್ಯ ಕಳೆದು ಅಲವು ವರ್ಷಗಳು ಕಳೆದರು ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಇದ್ದರು ಯಾವುದೇ ಪ್ರಯೋಜನವಾಗುತ್ತಿಲ್ಲ ಸಂವಿಧಾನ ಆರ್ಟಿಕಲ್ 21 ರ ಪ್ರಕಾರ ಸರ್ವರಿಗೂ ಸಮಾನ ಶಿಕ್ಷಣ ನೀಡಬೇಕು, ವಾಸ ಮಾಡಲು ಮನೆ ,ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದುಡಿಯಲು ಕೆಲಸ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಆದರೆ ಕಾರ್ಮಿಕರಿಗೆ ಯಾವುದೇ ಸೌಕರ್ಯ ನೀಡುತ್ತಿಲ್ಲ ಆದಕಾರಣ ಸರ್ಕಾರ ಕೂಡಲೇ ನಗರದಲ್ಲಿ ವಾಸ ಮಾಡುವ ಕಾರ್ಮಿಕರಿಗೆ ನಿವೇಶನ ನೀಡಿ, ಗ್ರಾಮೀಣ ಭಾಗದ ಕಾರ್ಮಿಕರಿಗೆ ಎರಡೆಕೆರೆ ಭೂಮಿ ನೀಡಿ ಗುತ್ತಿಗೆ ಪದ್ಧತಿಯನ್ನು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ,ಕೆ.ಗೋಪಿ,ಶ್ರೀಕಾಂತ,ನರಸಿಂಹಲು,ಅಂಜನೇಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares