ವಿಜಯನಗರವಾಣಿ ಸುದ್ದಿ
ಹೊಸಪೇಟೆ: ರೈತರನ್ನು ಉಗ್ರರೆಂದು ಕರೆದಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ರನ್ನ ರಾಜಿನಾಮೆ ನೀಡಬೆಕೆಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಬುಧವಾರ ಭಗತ್ ಸಿಂಗ್ ವೃತ್ತದಲ್ಲಿ ಸಿಐಟಿಯುನ ಜಿಲ್ಲಾಧ್ಯಕ್ಷ ಆರ್ ಎಸ್ ಬಸವರಾಜ ಮಾತನಾಡಿ, ಕರ್ನಾಟಕದ ರೈತರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ, ದಹಲಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತ ಪ್ರತಭಟನಕಾರರನ್ನು ಬಿ.ಸಿ ಪಾಟೀಲ್ ಉಗ್ರರೆಂದು ಕರೆದಿರುವುದು ಇದು ಹೇಯ ಕೃತ್ಯವಾಗಿದೆ ಅವರು ರೈತರ ಮುಂದೆ ಕ್ಷಮೆಯಾಚಿಸಬೇಕು ಇಲ್ಲವಾದರೆ ನಾವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೆಹಲಿಯ ಕೃಷಿ ಕಾಯ್ದೆ ಹೋರಾಟ ಮಾಡುವ ರೈತರಿಗೆ ಭಯೋತ್ಪಾದಲರು ಅಂತ ಕರೆದಿರುವುದು ನಾಚಿಗೇಡಿನ ಕೆಲಸವಾಗಿದೆ, ಇವರುಗಳ ನಡವಳಿಕೆ ನೊಡ್ತಿದ್ರೆ ಕಾರ್ಪೋರೆಟ್ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಸಚಿವರಾಗಿವುದಕ್ಕೆ ನಲಾಯಕ ಇದಾರೆ. ಈ ಕೂಡಲೇ ಸಚಿವ ಸ್ಥಾನದಿಂದ ವಜ ಮಾಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಸಚಿವ ಸಂಪಟದಿಂದ ಬಿ.ಸಿ ಪಾಟೀಲ್ ರನ್ನು ಈ ಕೂಡಲೇ ಕೈ ಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯುನ ತಾಲೂಕು ಕಾರ್ಯದರ್ಶಿ ಭಾಸ್ಕರ್ ರೆಡ್ಡಿ, ಡಿಎಸ್ ಎಸ್ ಜಿಲ್ಲಾಕ್ಷ ಜಂಬಯ್ಯ ನಾಯಕ, ಎಸ್ ಎಫ್ ಐ ನ ತಾಲೂಕು ಅಧ್ಯಕ್ಷ ಶಿವುಕುಮಾರ, ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಪವನ್, ಕಾವ್ಯಾಂಜಲಿ, ಆಯಿಷ, ಮಾರೇಶ್ ಇನ್ನಿತರರಿದ್ದರು.