ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ: ಆರೋಗ್ಯದ ಬಗ್ಗೆ ಕಾಳಜಿ ಇರಲಿ-ವಿನಯ ಕುಮಾರ್

Share and Enjoy !

Shares
Listen to this article

ರಾಯಚೂರು:ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ನೋಡಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷ ಈ.ವಿನಯ್ ಕುಮಾರ್ ಅವರು ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಷ್ಟ್ರೀಯ ಕರ್ಮಚಾರಿಗಳ ಆಯೋಗ, ಜಿಲ್ಲಾಡಳಿತ, ನಗರಸಭೆ,ನೇತ್ರ ಐ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ಹಾಗೂ ಕನ್ನಡಕ ವಿತರಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ,
ನಗರದಲ್ಲಿ ಪ್ರತಿದಿನ ಬೆಳಗ್ಗೆಯಿಂದ ಪೌರಕಾರ್ಮಿಕರು ಎಲ್ಲ ಕಡೆ ಸ್ವಚ್ಛತೆ ಮಾಡುವಲ್ಲಿ ತಲ್ಲಿನರಾದ ಇವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.ಯಾವುದೇ ಕಾಯಿಲೆ ಇರಲಿ, ಮಧುಮೇಹ, ಚರ್ಮರೋಗ, ಕಣ್ಣಿನ ಸಂಬಂದಿಸಿ ಇನ್ನಿತರ ಖಾಯಿಲೆಗಳ ಬಗ್ಗೆ ತಪಾಸಣೆ ಇಂದು ಮಾಡುತ್ತಿದ್ದು ವೈದ್ಯರ ಸಲಹೆ ಮತ್ತು ಔಷಧಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ
ಕೆ.ಎಸ್.ಸತೀಶ ಮಾತನಾಡಿ ನಗರದ ಸ್ವಚ್ಛತೆ ಮಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವ ದಾಗಿದೆ. ನಗರದ ಎಲ್ಲ ಕಡೆ ಕೆಲಸ ಮಾಡುತ್ತಿದ್ದು, ಅವರ ಆರೋಗ್ಯ ಕಾಪಾಡಿಕೊ ಳ್ಳುವುದು ಅಷ್ಟ ಮಹತ್ವ, ಸಫಾಯಿ ಕರ್ಮಚಾರಿ ಆಯೋಗದಿಂದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಸರ್ಕಾ ರದಿಂದ ಹಲವು ಅಭಿವೃದ್ಧಿ ಕಾರ್ಯಕ್ರಮ, ಹಮ್ಮಿಕೊಳ್ಳುತ್ತಿದ್ದು, ಸಫಾಯಿ ಕರ್ಮಚಾರಿಗಳ ಮಕ್ಕಳಿಗಾಗಿ ೬ನೇ ಪ್ರವೇಶಗೆ ನೇರ ಪ್ರವೇಶ, ಸಮಾಜ ಕಲ್ಯಾಣ, ಹಿಂದುಳಿಯ ವರ್ಗ, ಅಂಬೇ ಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅನೇಕ ಯೋಜನೆ ಗಳಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿಗಳ ಮಕ್ಕಳನ್ನು ತಮ್ಮ ಕೆಲಸಗಳಿಗೆ ಕರೆದುಕೊಂಡು ಹೋಗದೇ ಅವರಿಗೆ ಶಿಕ್ಷಣ ಒದಗಿಸಿ ವಿದ್ಯಾವಂತರನ್ನಾಗಿ ಮಾಡಿ ಉನ್ನತ ಹುದ್ದೆಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದರು.
ಈ ವೇಳೆ ಪೌರ ಕಾರ್ಮಿಕರಿಗೆ ಆರೋಗ್ಯ ತಪಾ ಸಣೆ ಮಾಡಿ ಔಷಧಿ, ಕನ್ನಡಕಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಮಹೇಂದ್ರ ಕುಮಾರ್,ಪೌರಾಯುಕ್ತ ವೆಂಕಟೇಶ, ಶರಣ ವಿಜಯ ರಾಹುಲ್ ತಿವಾರಿ, ಸಹಾಯಕ ನಿರ್ದೇ ಶಕ ರಾಘವೇಂದ್ರ ಜಲ್ದಾರ್, ಸೇರಿದಂತೆ ಅನೇಕ ರು ಇದ್ದರು.

Share and Enjoy !

Shares