ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ: ಮೋಹಿತ್ ಮಸ್ಕಿ

Share and Enjoy !

Shares
Listen to this article

ವಿಜಯನಗರವಾಣಿ

ಬಳ್ಳಾರಿ:ಭಾರತ ದೇಶದ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ ಎಂದು ಸುಕೋ ಬ್ಯಾಂಕ್‌ನ ಅಧ್ಯಕ್ಷ ಮೋಹಿತ್ ಮಸ್ಕಿ
ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್‌ನ ಗಡಿಗೆ ಚೆನ್ನಪ್ಪ ವೃತ್ತದ ಶಾಖೆಯಲ್ಲಿ ಮಂಗಳವಾರ ನಡೆದ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು ಅವರು
ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ತನ್ನ ಪ್ರಸ್ತಾವನೆಯಲ್ಲಿಯೇ ಸ್ಪಷ್ಟಪಡಿಸಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿರುವ ನಮ್ಮ ದೇಶದಲ್ಲಿ ಭಾತೃತ್ವ, ಸೌಹಾರ್ದತೆ ಮತ್ತು ಸಾಮರಸ್ಯದ ಬದುಕು ಮಣ್ಣಿನ ಕಣಕಣದಲ್ಲೂ ಇದೆ ಎಂದರು.
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಎಸ್. ಅಗ್ನಿಹೋತ್ರಿ ಅವರು ಮಾತನಾಡಿ, ಸಂವಿಧಾನವನ್ನು ಜಾರಿ ಮಾಡಿ ಅಖಂಡ ಭಾರತ ನಿರ್ಮಾಣ ಮಾಡಿದ ನಿಟ್ಟಿನಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಬ್ಯಾಂಕ್‌ನ ನಿರ್ದೇಶಕಿ ಸಾವಿತ್ರಿ ದಾನಗೌಡ ಅವರು ಮಾತನಾಡಿ, ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ಸೇರಿದಂತೆ ರಾಷ್ಟ್ರೀಯ
ಹಬ್ಬಗಳ ಆಚರಣೆಯಿಂದಾಗಿ ನಮ್ಮ ಯುವಶಕ್ತಿಯಲ್ಲಿ ದೇಶಭಕ್ತಿ, ರಾಷ್ಟಪ್ರೇಮ ಮತ್ತು ರಾಷ್ಟಾಭಿಮಾನ ಮೂಡಿಸಲು ನೆರವಾಗಲಿವೆ ಎಂದರು. ರಾಯಲ್ ಶಾಖೆಯ ವ್ಯವಸ್ಥಾಪಕರಾದ ಫಯಾಜ್ ಅಹಮದ್ ಸ್ವಾಗತಸಿದರು,ನೂತನ ಸಿಬ್ಬಂದಿ ಸಂಗೀತಾ ಯರದಾಳ್, ಮುಖ್ಯ ಶಾಖೆಯ ವ್ಯವಸ್ಥಾಪಕರಾದ ವಿನಯಕುಮಾರ ಜೋಶಿ, ಪಟೇಲ ನಗರ ಶಾಖೆಯ ವ್ಯವಸ್ಥಾಪಕರಾದ ವೀರನಗೌಡ,
ಮಾನಸ, ರಂಜಿತಾ ಮತ್ತು ರಕ್ಷಿತಾ ಅವರು ದೇಶಭಕ್ತಿ ಗೀತೆ ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಸುಕೋ ಬ್ಯಾಂಕ್‌ನ ಈವೆಂಟ್ ಮೇನೇಜರ್ ಎಚ್.ಎಂ. ಅಡವಿಸ್ವಾಮಿ ಇದ್ದರು

Share and Enjoy !

Shares