ಆನ್‌ಲೈನ್ ಬಸ್‌ಪಾಸ್ ಮಾಡಿರುವುದನ್ನು ರದ್ದು ಪಡಿಸಬೇಕೆಂದು ಮನವಿ

Share and Enjoy !

Shares
Listen to this article

 

ವಿಜಯನಗರವಾಣಿ
ಹೊಸಪೇಟೆ: ಆನ್‌ಲೈನ್ ಬಸ್‌ಪಾಸ್ ಮಾಡಿರುವುದನ್ನು ರದ್ದು ಪಡಿಸಬೇಕೆಂದು ಎಸ್.ಎಫ್‌ನ ಕಾರ್ಯಕರ್ತರು ವಿಭಾಗಿಯ ನಿಯಂತ್ರಣಾಧಿಕಾರಿಗಳಿ ಮನವಿ ಪತ್ರ ನೀಡಿದರು.
ಎಸ್‌ಎಫ್‌ಐನ ತಾಲೂಕು ಅಧ್ಯಕ್ಷ ಶಿವುಕುಮಾರ ಮಾತನಾಡಿ, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ಆನ್‌ಲೈನ್ ಸೇವಾ ಸಿಂಧು ಪೋರ್ಟ್ಲ್ಲಿ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದೆ, ಆದ್ರೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕಾದರೇ ಎಲ್ಲಾ ದಾಖಲಾತಿಗಳು ಸರಿಯಾಗಿ ಇದ್ದರೆ ಮಾತ್ರ ಅದು ಅರ್ಜಿಯನ್ನು ತೆಗೆದುಕೊಳ್ಳುತ್ತದೆ ಇಲ್ಲವಾದರೆ ತೆಗೆದುಕೊಳ್ಳುವುದಿಲ್ಲ, ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಬೇಕಾದರೇ ಆಧಾರ್ ಕಾರ್ಡ್ಗೆ ಕಡ್ಡಾಯವಾಗಿ ಮೊಬೈಲ್ ನಂಬರ್ ಸೇರ್ಪಡೆಯಾಗಿರಬೇಕು, ಇಲ್ಲವಾದರೆ ಅರ್ಜಿ ಹಾಕುವುದಕ್ಕೆ ಬರುವುದಿಲ್ಲ, ಒಂದು ವೇಳೆ ಮೊಬೈಲ್ ನಂಬರ್ ಲಿಂಕ್ ಇದ್ದರೂ ಸಹ ಹಳೆ ಮೊಬೈಲ್ ನಂಬರ್ ಕಳೆದಿರುತ್ತವೆ ಅಥವಾ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಇದ್ದರೂ ಕೂಡ ಹೆಸರಿನ ಮುಂದೆ ಇನ್ಸಿಯಾಲ್ ಇದ್ದು ಒಂದು ಡಾಟ್ ಇದ್ದರೇ ಅದು ಅರ್ಜಿಯನ್ನು ತೆಗೆದುಕೊಳ್ಳುವುದಿಲ್ಲ, ಇವು ಎಲ್ಲಾವು ಸರಿ ಇದ್ದರೂ ಆನ್‌ಲೈನ್ ಸೆಂಟರ್‌ಗೆ ಹೊದ್ರೆ ಸರ್ವರ್ ಇರುವುದಿಲ್ಲ, ಕಾರಣ ಇಡಿ ರಾಜ್ಯದ್ಯಾಂತ ಅರ್ಜಿಗಳನ್ನು ಹಾಕುವುದರಿಂದ ಸರ್ವರ್ ಬಿಸಿ ಇರುತ್ತದೆ ಒಂದು ಅರ್ಜಿ ಹಾಕುವುದಕ್ಕೆ ದಿನಗಟ್ಟಲೇ ಕಾಯುವಂತಹ ಸ್ಥಿತಿ ನಿರ್ಮಾವಾಗಿದೆ. ಜತೆಗೆ ಶೇ.೧೦೦ ವಿದ್ಯಾರ್ಥಿಗಳಲ್ಲಿ ಶೇ.೯೦ ವಿದ್ಯಾರ್ಥಿಗಳ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಸೇರ್ಪಡೆಯಾಗಿರುವುದಿಲ್ಲ, ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸುವುದಕ್ಕೆ ಕನಿಷ್ಟ ೭ ದಿನಗಳಾದ್ರು ಬೇಕಾಗುತ್ತದೆ ಮತ್ತು ಆಧಾರ್ ಕಾರ್ಡ್ ಮಾಡಿಸುವುದಕ್ಕೆ ಪ್ರತಿ ವಿದ್ಯಾರ್ಥಿಗೆ ೧೦೦ ರೂ. ಹಾಗೂ ಆನ್‌ಲೈನ್ ಅರ್ಜಿ ಹಾಕುವುದಕ್ಕೆ ೧೦೦ ರೂಗಳನ್ನು ವಿದ್ಯಾರ್ಥಿ ಖರ್ಚು ಮಾಡಿಕೊಳ್ಳಬೇಕಾಗುತ್ತದೆ. ಕಾಲೇಜಿನಲ್ಲಿ ಒಬ್ಬ ಬಸ್‌ಪಾಸ್ ವಿದ್ಯಾರ್ಥಿಯಿಂದ ೨೦ ರೂ. ಹಣವನ್ನು ಹೆಚ್ಚವರಿಯಾಗಿ ಸಂಗ್ರಹ ಮಾಡಲಾಗುತ್ತದೆ ಎಂದು ಆರೋಪಿಸಿದರು. ಹಾಗಾಗಿ ಆನ್‌ಲೈನ್ ಅರ್ಜಿ ಹಾಕುವುದನ್ನ ರದ್ದು ಮಾಡಿ ಮ್ಯಾನ್ವಲ್ ಕಾಲೇಜಿನಿಂದಲೇ ಬಸ್‌ಪಾಸ್‌ಗಳನ್ನು ಮಾಡಿಸಿ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.
ಬಸ್‌ಪಾಸ್ ಮಾಡಿಕೊಳ್ಳೊಕೆ ಹೋದ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯ ಸಿಬ್ಬಂದಿಗಳಿAದ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡುತ್ತಿರುವುದು ಕಂಡು ಬಂದಿದೆ ಇದು ಹೀಗೆ ಮುಂದುವರೆದರೇ ಕಾನೂನಿನ ರಿತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಬದಲ್ಲಿ ಎಸ್‌ಎಫ್‌ಐನ ಉಪಾಧ್ಯಾಕ್ಷ, ಗಣೇಶ್ ಸದಸ್ಯರಾದ ಪವನ್, ಕಾವ್ಯಾಂಜಲಿ, ಆಯಿಷ, ಮಾರೇಶ್ ಇನ್ನಿತರರಿದ್ದರು.

Share and Enjoy !

Shares