ವಿಜಯನಗರವಾಣಿ
ಹೊಸಪೇಟೆ: ನಗರದ ಸುತ್ತಮುತ್ತ ಒಂದು ವಾರಗಳ ಕಾಲ ಹಂಪಿ ಉತ್ಸವದ ಅಂಗವಾಗಿ ‘ದಿ ಹಂಪಿ ಹೆಸರಿನಲ್ಲಿ ಕಾರು ಮತ್ತು ಬೈಕ್ ಗಳ ರೇಸ್’ ನಡೆಸಲು ಫೆಸ್ಟಿವಲ್ ಆಫ್ ಮೊಟರ್ಸ್ ಸ್ಪೋರ್ಟ್ ಅಸೋಸಿಯೇಷನ್ ನಿರ್ಧರಿಸಿದ್ದು, ಜನವರಿ 29 ರಿಂದ ಒಂದು ವಾರಗಳ ಕಾಲ ರೇಸ್ ನಡೆಯಲಿದೆ ಎಂದು ವಿಜಯನಗರ ಮೋಟರ್ ಸ್ಪೋಟ್ಸ್ ಆಕಾಡಮಿಯ ಮುಖ್ಯಸ್ಥ ಗಿರಿಜಾ ಶಂಕರ್ ಜೋಶಿ ಹೇಳಿದರು.
ಅವರು ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಯೋಜಕರು, ಹೊಸಪೇಟೆಯ ಜಂಬುನಾಥನ ಗುಡ್ಡದಲ್ಲಿ ಬೈಕ್ ಮತ್ತು ಕಾರ್ ರೇಸ್ ನಡೆಸಲಾಗುತ್ತದೆ. ರೇಸ್ ನಲ್ಲಿ 250 ಕ್ಕೂ ಹೆಚ್ಚು ಜನ ನ್ಯಾಶನಲ್ ಚಾಂಪಿಯನ್ಸ್ ಕೂಡ ಭಾಗಿಯಾಗಲಿದ್ದಾರೆ.
120ರಿಂದ 450 ಬೈಕ್‌ಗಳು ಭಾಗವಹಿಸಲಿವೆ ಒಟ್ಟು 146 ಕಿ.ಮೀ ಓಡಿಸಲಾಗುತ್ತದೆ ಹೊಸಪೇಟೆಯ ಜಂಬುನಾಥ ಹಳ್ಳಿಯಿಂದ ಸ್ಪರ್ಧೆ ಶುರುವಾಗಿ ಧರ್ಮಸಾಗರದ ವರೆಗೂ 5 ಹಂತಗಳಲ್ಲಿ ಒಟ್ಟು 62 ಕಿ.ಮೀ ಓಡಿಸಲಾಗುತ್ತದೆ. ಈ ಹಿಂದೆ ಮಂಗಳೂರು, ಬೆಂಗಳೂರು, ಕೊಯಮತ್ತೂರು ನಡೆಸಲಾಗಿದ್ದು, ಕೊನೆಯದಾಗಿ ಹಂಪಿಯಲ್ಲಿ ನಡೆಸಲಾಗುತ್ತಿದೆ.
ಈ ಸಂದರ್ಭದಲ್ಲಿ ದ್ವಿಚಕ್ರವಾಹನದ ಉಸ್ತುವಾರಿ ಶ್ಯಾಮ್ ಕೋತಾರಿ, ದ್ವಿಚಕ್ರ ವಾಹನದ ವಿಜೇತೆ ಐಶ್ವರ್ಯ, ಜಿ.ಎಸ್ ಜೋಸೆಫ್. ರಿಲೇ ಮುಖ್ಯಸ್ಥ ಸಂತೋಷ್ ಹೆಚ್.ಎಮ್, ರಿಲೇ ನಿರ್ದೇಶಕ ರೋಹಿತ್ ಗೌಡ, ಸಿ.ಕೆ ಚಿನ್ನಪ್ಪ, ಧರ್ಪನ ಗೌಡ ಇನ್ನಿತರರಿದ್ದರು.