ತೋಂಡಿಹಾಳ ಜಾತ್ರೆ ವಿಧಿ ವಿಧಾನಕ್ಕೆ ಅವಕಾಶ ನೀಡಿ

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸಗೂರ: ಫೆ. 6 ರಂದು ತೋಂಡಿಹಾಳ ಜಾತ್ರೆ ತಾಲೂಕಿನ ಮುದಗಲ್ ಪಟ್ಟಣ ಸಮೀಪದ ತೋಂಡಿಹಾಳ ಹುಲಿಗೆಮ್ಮ ದೇವಿ ಜಾತ್ರೆ ವಿಧಿ ವಿಧಾನ ಆಚರಣೆ ಮಾಡಲು ಅವಕಾಶ ನೀಡಬೇಕೆಂದು ಗ್ರಾಮಸ್ಥ ನಿವೃತ್ತ ತಹಸೀಲ್ದಾರ್ ಹಲ್ಲಪ್ಪ ಅವರು ತಾಲ್ಲೂಕು ಆಡಳಿತಕ್ಕೆ ಹೇಳಿದರು.ತೋಂಡಿಹಾಳ ಗ್ರಾಮದಲ್ಲಿ ಶುಕ್ರವಾರ ಜರುಗಿದ ಜಾತ್ರೆ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿಅವರು. ನಮ್ಮ ಪಕ್ಕದಲ್ಲಿರುವ ಗಡ್ಡಿ ಗದ್ದೆಮ್ಮ ದೇವಿ ಜಾತ್ರೆ ಭಾರಿ ವಿಜೃಂಭಣೆಯಿಂದ ಜರುಗಿದೆ.ಅದರಂತೆ ನಮಗೆ ಅಕಾಶ ನೀಡಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತ ಜಾತ್ರೆಯನ್ನು ಮಾಡುತ್ತೇವೆಂದು ಗ್ರಾಮಸ್ಥರು ಲಿಂಗಸೂರು ತಾಲ್ಲೂಕಿನ ತಹಶೀಲ್ದಾರ್ ರಾದ

ಚಾಮರಾಜ ಪಾಟೀಲ್ ಹಾಗೂ ಮಸ್ಕಿ ಸಿಪಿಐ ದೀಪಕ್ ಭೂಸರಡ್ಡಿ ಮಾತನಾಡುತ್ತ ಕೊರೊನಾ ಇರುವದರಿಂದ ಈ ವರ್ಷ ಜಾತ್ರೆ ರದ್ದು ಮಾಡುತ್ತೇವೆ.
ಜಾತ್ರೆ ನಿಮಿತ್ತ ದೂರದ ಊರಿನ ಜನರು ಬರುವಂತಿಲ್ಲ. ಗ್ರಾಮ ಪ್ರವೇಶ ಮಾಡುವ ದಾರಿಗಳಿಗೆ ಪೊಲೀಸರನ್ನು ಕಾವಲು ಹಾಕಿ ಯಾರು ಬರದಂತೆ ತಡೆಯುತ್ತೇವೆ.
ಜಾತ್ರೆಯಲ್ಲಿ ಅಂಗಡಿಗಳನ್ನು ಹಾಕುವಂತಿಲ್ಲ. ಪ್ರಾಣಿ ಬಲಿ ಮಾಡುವಂತಿಲ್ಲ ಎಂದು ಹೇಳಿದಕ್ಕೆ ಗ್ರಾಮಸ್ಥರು ಆಕ್ಷಪಣೆ ಮಾಡಿದರು.
ರಾಜಕೀಯ ಸಭೆ ಸಮಾರಂಭಕ್ಕೆ ಲಕ್ಷಂತರ ಜನರು ಸೇರುತ್ತಾರೆ. ಅಲ್ಲಿ ಯಾವುದೇ ನಿರ್ಭಂಧ ಇಲ್ಲ. ಆದರೆ ಈ ಜಾತ್ರೆಗೆ ಏಕೆ ಇಂತ ಕಾನೂನು. ಎಲ್ಲರಿಗೂ ಒಂದೆ ಕಾನೂನು ಇರಬೇಕು. ನಮಗೂ ಜಾತ್ರೆ ನಡೆಸಲು ಅನುಮತಿ ನೀಡಬೇಕೆಂದ ಗಾಮಸ್ಥರ ಮಾತಿಗೆ ತಹಸೀಲ್ದಾರ್ ಚಾಮರಾಜ ಪಾಟೀಲ ಆಕ್ರೋಶ ಗೊಂಡರು ನೀನು ಈ ರೀತಿ ಮಾತನಾಡಬೇಡ ಎಂದರು. ನಮಗೆ ಮಾತನಾಡಲು ಅವಕಾಶ ನೀಡದಿದ್ದರೆ ನಮಗೆ ಏಕೆ ಸಭೆಗೆ ಆಹ್ವಾನಿಸಿದರಿ ಎಂದು ಮಾತಿನ ಚಕಮಕಿ ಜರುಗಿತು. ಮಧ್ಯೆದಲ್ಲಿ ಸಿಪಿಐ ದೀಪಕ್ ಭೂಸರಡ್ಡಿ ಬಂದ ಶಾಂತಗೊಳಿಸಿದರು.
ಮುದಗಲ್ ಪಿ ಎಸ್.ಐ ಡಾಕೇಶ ಉಪ್ಪಾರ, ತಾಲ್ಲೂಕು ನರೇಗಾ ಯೋಜನಾಧಿಕಾರಿ ಸೋಮನಗೌಡ ಪಾಟೀಲ, ನಾಗರಾಳ ವೈದ್ಯಾಧಿಕಾರಿ ತಳಹಳ್ಳಿ, ಮುದಗಲ್ ಉಪ ತಹಸೀಲ್ದಾರ್ ನಾಗರಾಜ, ನಾಗರಾಳ ವಿ.ಎಸ್.ಎಸ್.ಎನ್ ಅಧ್ಯಕ್ಷ ಮಲ್ಲಪ್ಪ ಭಗವತಿ, ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶರಣಮ್ಮ ಅಧಿಕಾರಿ ಸೇರಿದಂತೆ ಇನ್ನಿತರ ಇದ್ದರು

Share and Enjoy !

Shares