ಬುಡಾ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಮರು ನೇಮಕ

ಬಳ್ಳಾರಿ: ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಆದೇಶದಂತೆ ಮತ್ತೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ) ಅಧ್ಯಕ್ಷರನ್ಮಾಗಿ ದಮ್ಮೂರು ಶೇಖರ್ ಅವರನ್ನು ಮುಂದುವರೆಸಿರುವ ಆದೇಶ ಇಂದು ಹೊರ ಬಿದ್ದಿದೆ.
ಕೆ.ಎ.ರಾಮಲಿಂಗಪ್ಪ ‌ಅವರಿಗೆ ವಿಜಯನಗರ ಅಭಿವೃದ್ಧಿ ಪ್ರಾಧಿಕಾರ(ವಾಡಾ)ದ ಅಧ್ಯಕ್ಷ ಸ್ಥಾನ ನೀಡಿ‌ ಮುಖ್ಯ‌ಮಂತ್ರಿಗಳ ಶಿಫಾರಸ್ಸಿನಿಂತೆ ನೇಮಕ‌ ಮಾಡಿ‌ ಆದೇಶ ಹೊರಡಿಸಲಾಗಿದೆ.
ಮೊನ್ನೆ ಸಂಜೆಯಷ್ಟೇ ದಮ್ಮೂರು ಶೇಖರ್ ಅವರನ್ನು‌ ಪದಚ್ಯುತಿಗಿಳಿಸಿ ರಾಮಲಿಂಗಪ್ಪ ಅವರನ್ನು ನೇಮಕ‌ ಮಾಡಿತ್ತು.
ಆದರೆ ಚಲದಂಕ ಮಲ್ಲನಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಆಪ್ತ
ದಮ್ಮೂರು‌ ಶೇಖರ್ ಪುನಃ ಬುಡಾ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪಕ್ಷದ ಜಿಲ್ಲೆಯ‌ ಹಿರಿಯ ಮುಖಂಡ ರಾಮಲಿಂಗಪ್ಪ‌ ಅವರಿಗೆ ಮತ್ತು‌ ಅವರನ್ನು‌ ನೇಮಕ‌ ಮಾಡುವಂತೆ ಶಿಫಾರಸ್ಸು ಮಾಡಿದ್ದ ಜಿಲ್ಲಾ ಉಸ್ತುವಾರಿ‌ಸಚಿವ ಆನಂದ್ ಸಿಂಗ್ ಅವರಿಗೆ ಮುಖಭಂಗ ಆಗಬಾರದೆಂದು ರಾಮಲಿಂಗಪ್ಪ‌ ಅವರಿಗೆ ತೋರಣಗಲ್ ನಲ್ಲಿ‌ಕಚೇರಿ‌ಹೊಂದಿರುವ ವಾಡಾ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Share and Enjoy !

Shares