ಸಮಾಜದ ಗುರು ಹಿರಿಯರ ಮಾರ್ಗದರ್ಶನ ಪಡೆದು ಸರ್ವಾಂಗೀಣ ಪ್ರಗತಿಗೆ ಶ್ರಮಿಸುವೆ:ಹನುಮೇಶ್ ಉಪ್ಪಾರ

Share and Enjoy !

Shares

ಬಳ್ಳಾರಿ,ಜ.29-ಉಪ್ಪಾರ ಸಮುದಾಯ ಸಂಘಟನಾತ್ಮಕವಾಗಿ ಹಿಂದುಳಿದಿದ್ದು, ಸಮಾಜದ ಗುರು ಹಿರಿಯರ ಮಾರ್ಗದರ್ಶನ ಪಡೆದು ಸರ್ವಾಂಗೀಣ ಪ್ರಗತಿಗೆ ಶ್ರಮಿಸುವುದಾಗಿ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಂಘದ ನೂತನ ಜಿಲ್ಲಾಧ್ಯಕ್ಷ ಹನುಮೇಶ್ ತಿಳಿಸಿದ್ದಾರೆ.ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯದ ಸ್ಫೂರ್ತಿದಾಯಕ ಮಹನೀಯರು ಶ್ರೀ ಭಗೀರಥರು. ನಗರದ ಯಾವುದಾದರೊಂದು ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡುತ್ತೇವೆ. ಕೃಷಿ ಉತ್ಪನ್ನ ಮಾರುಕಟ್ಟೆ ಅಥವಾ ಸಂಗನಕಲ್ಲು ರಸ್ತೆಯ ಕೆಇಬಿ ಸರ್ಕಲ್ ಇವೆರಡರಲ್ಲಿ ಒಂದನ್ನು ಭಗೀರಥ ಮಹರ್ಷಿಯವರ ಹೆಸರಿಡಬೇಕು ಎಂದು ಮನವಿ ನೀಡುತ್ತೇವೆ. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಸಮುದಾಯದ 4 ಜನರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಿ ಪ್ರೋತ್ಸಾಹಿಸಬೇಕು. ಈ ದಿಸೆಯಲ್ಲಿ ಸಂಬಂಧಪಟ್ಟ ರಾಜಕೀಯ ಧುರೀಣರ ಜೊತೆ ಮಾತನಾಡುವುದಾಗಿ ಹೇಳಿದ ಅವರು, ಶಿಕ್ಷಣ ಹಾಗೂ ಔದ್ಯಮಿಕ ಕ್ಷೇತ್ರದಲ್ಲಿ ಸಮುದಾಯವನ್ನು  ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುವುದಾಗಿ ಹೇಳಿದರು.ಯು.ಯರಸ್ವಾಮಿ , ದುರುಗೇಶ್ ಉಪ್ಪಾರ ,ಸಮುದಾಯದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕೃಷ್ಣ ಸಂಗನಕಲ್ಲು, ಈರಣ್ಣ ಚರಕುಂಟೆ, ಕೃಷ್ಣ ಬಳ್ಳಾರಿ, ಮಲ್ಲಪ್ಪ, ನಾಗರಾಜ ಕೆಇಬಿ., ಹೊನ್ನಪ್ಪ, ಸಿದ್ದೇಶ, ಈಶ್ವರಪ್ಪ, ಅಂಜಿನಿ, ತಿಮ್ಮಪ್ಪ, ಪ್ರಕಾಶ್ ಇನ್ನಿತರರು ಇದ್ದರು.

 

 

 

 

Share and Enjoy !

Shares