ರಾಯಚೂರು,ಜ.೩೧- ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶೆ ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆ ಎಂದು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಹೇಳಿದರು.ಅವರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಮಲಾಬಾಯಿ ನಿಜಾಮಕಾರ, ಹೊಸೂರು ಹಂಪಯ್ಯಶೆಟ್ಟಿ ಸಹಯೋಗದಲ್ಲಿ ಹಮ್ಮಿಕೊಂಡ ದತ್ತಿ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪುಸ್ತಕ, ಕತೆ, ಕಾವ್ಯ ಮತ್ತ ಕಾದಂಬರಿಗಳ ವಿಮರ್ಶೆ ಮಾಡುತ್ತಿರುವದು ಕಡಿಮೆಯಾಗುತ್ತಿದೆ. ಕೇವಲ ಹಿರಿಯ ಸಾಹಿತಿಗಳ ಕೃತಿಗಳನ್ನು ಮಾತ್ರ ವಿಮೆರ್ಶೆ ಮಾಡಲಾಗುತ್ತಿದ್ದು, ಉಳಿದವರ ಕೃತಿಗಳ ವಿಮರ್ಶೆ ಕಣ್ಮರೆಯಾಗುತ್ತಿರುವುದು ಅಪಾಯಕಾರಿ ಬೆಳವಣಿಕೆ ಎಂದರು.
ಪತ್ರಿಕೆಗಳಲ್ಲಿ ಸಾಹಿತ್ಯದ ಕುರಿತು ಬರವಣಿಗೆ ಕಡಿಮೆಯಾಗಿದೆ. ಸಾಹಿತ್ಯ ಘೋಷ್ಠಿಗಳಲ್ಲಿ ಸಹ ಸಾಹಿತ್ಯ ವಿಷಯಗಳನ್ನು ಬಿಟ್ಟು ಅನ್ಯ ವಿಷಯಗಳ ಕುರಿತು ಚರ್ಚೆ, ವಾದ ನಡೆಯುತ್ತಿದೆ ಎಂದು ಹೇಳಿದರು.
ಕನ್ನಡದ ಕಾಗುಣಿತ ಸಹ ಗೊತ್ತಿಲ್ಲದವರು ಇಂದು ಉಪನ್ಯಾಸಕರಾಗುತ್ತಿದ್ದು, ಶಾಸನ ಸಾಹಿತ್ಯ ಓದುವವರು ಕಡಿಮೆಯಾಗಿದ್ದಾರೆ. ಹೀಗಾದರೆ ಶಾಸನ ಸಾಹಿತ್ಯ ಬೆಳೆಯುವುದಾದರೂ ಹೇಗೆ ಎಂದು ಕಳಕಳಿ ವ್ಯಕ್ತಪಡಿಸಿದರು.
ಇವೆಲ್ಲವೂಗಳ ನಡುವೆ ಗುಲಬರ್ಗಾ ವಿವಿಯಲ್ಲಿ ಪ್ರತಿ ತಿಂಗಳು ಎರಡು ಕೃತಿಗಳ ವಿಮರ್ಶೆ ಕಾರ್ಯಕ್ರಮ ನಡೆಯುತ್ತಿದ್ದು, ಅನುಕರಣಿಯವಾಗಿದೆ ಎಂದರು.
ಜೀವನದಲ್ಲಿ ಕೆಲವರನ್ನು ತಂಪು ಹೊತ್ತಿನಲ್ಲಿ ನೆನೆಯಬೇಕು ಎಂಬುದುಂಟು. ಅದರಂತೆ ಸರಳ, ಸಹೃದಯಿ ವ್ಯಕ್ತಿತ್ವ ಚೆನ್ನಣ್ಣ ವಾಲೆಕರದ ಅವರದು ಎಂದರು.
ಅವರ ಸಾಹಿತ್ಯ ಅಗಾಧವಾದರು ಮನುಷ್ಯ ಸರಳ. ಯಾರಿಗೆ ಸಮಸ್ಯೆಯಿದೆ ಎಂದು ತಿಳಿದಾಕ್ಷಣ ಸ್ಪಂದಿಸುವ ವ್ಯಕ್ತಿತ್ವದ ಸಾಹಿತಿ ಚೆನ್ನಣ್ಣವಾಲೆಕರ್ ಎಂದರು.
ಸಿದ್ದಮ್ಮ ಚೆನ್ನಣ್ಞ ವಾಲೆಕರ್ ಅವರು ಎಲೆಮರಿಕಾಯಿಯಂತೆ ಚೆನ್ನಣ್ಣ ವಾಲೇಕರ್ ಅವರು ಸಾಹಿತ್ಯ ಕೃಷಿಗೆ ಸಹಾಯ ಮಾಡಿದ್ದಾರೆ ಭರತ್ ನಿಜಾಮಕರ್ ಹೇಳಿದರು.
ಈ ಸಂದರ್ಭದಲ್ಲಿ ಬಸವಪ್ರಭು, ಶ್ರೀನಿವಾಸ ಸಿರನೂರಕರ್, ಬಾಬು ಬಂಡಾರಿಗಲ್, ಶರಣಪ್ಪ ಗೋನಾಳ, ಪ್ರವೀಣ್ ರೆಡ್ಡಿ ಗುಂಜಳ್ಳಿ, ಸಿದ್ದಮ್ಮ ಚೆನ್ನಣ್ಣ ವಾಲೇಕರ್, ಸೈಯದ್ ಹಫಿಜುಲ್ಲಾ, ಭಿಮನಗೌಡ ಇಟಗಿ, ವೀರಹನುಮಾನ್, ವಿ.ಎನ್.ಅಕ್ಕಿ, ಕೆ.ಕರಿಯಪ್ಪ ಜೆ.ಎಲ್.ಈರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು