ಚಲವಾದಿ ಮಹಾಸಭಾ: ಫೆ.13.ನೂತನ ಸದಸ್ಯರಿಗೆ ಸನ್ಮಾನ

Share and Enjoy !

Shares
Listen to this article

ರಾಯಚೂರು. ಜ.31.ಇತ್ತೀಚಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲವು ಸಾಧಿಸಿದ ಛಲವಾದಿ ಸಮುದಾಯದವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಫೆ.13 ರಂದು ಅಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಜಗನ್ನಾಥ ಸುಂಕರಿ ಅವರು ಹೇಳಿದರು.ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಫೆ.13 ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಛಲವಾದಿ ಮಹಾಸಭಾದ ವತಿಯಿಂದ ಜಿಲ್ಲೆಯ ನೂತನ ನಗರ ಸಭೆ,ಪಟ್ಟಣ ಪಂಚಾಯತ್, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸುಮಾರು 94 ಜನರು ಆಯ್ಕೆಯಾಗಿದ್ದಾರೆ,

ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳ ಗುರಿಯಾಗಿಟ್ಟುಕೊಂಡು ಅಭಿನಂದನೆ ಕಾರ್ಯಕ್ರಮವನ್ನು ಅಮ್ಮಿಕೊಳ್ಳಗಿದೆ ಜಿಲ್ಲೆಯ ಸಮುದಾಯದವರು ಆದಷ್ಟು ಕೊಡಲೇ ಆಯ್ಕೆಯಾದ ಸದಸ್ಯರು ಭಾವಚಿತ್ರ ಮತ್ತು ಬಯೋಡೇಟಾವನ್ನು ಚಲವಾದಿ ಮಹಾಸಭಾದಲ್ಲಿ ನೊಂದಣಿ ಮಾಡಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮಕ್ಕೆ ಮಹಾಸಭಾದ ಸಂಸ್ಥಾಪಕರಾದ ಕೆ.ಶಿವರಾಂ ಸಮುದಾಯದ ಸ್ವಾಮಿಜೀಗಳದ ಜ್ಞಾನಪ್ರಕಾಶ್ ಸ್ವಾಮಿ ಆಗಮಿಸಿದ್ದು ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡೆಪ್ಪ ಕಡ್ಲೂರ್,ಲಕ್ಷಣ ಹುಳಿಗಾರ, ಸತ್ಯನಾರಾಯಣ, ಬಿ.ರಮೇಶ್, ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share and Enjoy !

Shares