ರಾಯಚೂರು.ಜ.31.ಶೃತಿ ಸಾಹಿತ್ಯ ಮೇಳದ ವತಿಯಿಂದ ದಾಸ ಸಾಹಿತ್ಯದ ಹಿರಿಯ ವಿದ್ವಾಂಸರಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅವರ ಮೂರು ಕೃತಿಗಳ ಲೋಕರ್ಪಣೆ ಕಾರ್ಯಕ್ರಮವನ್ನು ಫೆ.2ರಂದು ಸಂಜೆ 5:30ಕ್ಕೆ ಅಮ್ಮಿಕೊಳ್ಳಲಾಗಿದೆ ಎಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಫೆ.2 ರಂದು ಸಂಜೆ 5.30ಕ್ಕೆ ನಗರದ ಬೋಳಮಾನದೊಡ್ಡಿ ರಸ್ತೆಯ ಶಾರದ ವಿದ್ಯಾನಿಕೇತನ ಶಾಲೆಯಲ್ಲಿ ಶೃತಿ ಸಾಹಿತ್ಯ ಮೇಳದ ವತಿಯಿಂದ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ರವರು ರಚಿಸಿರುವ ದಾಸ ಸಾಹಿತ್ಯದ 3 ಕೃತಿಗಳದ ಗುರುನಮನ,ಹೊಂಗಿರಣ ಮತ್ತು ಸಖ್ಯಭಾವದ ಕೃತಿಗಳ ಲೋಕಾರ್ಪಣೆಯನ್ನು ಅಮ್ಮಿಕೊಳ್ಳಗಿದೆ.
ಕೃತಿಗಳ ಲೋಕಾರ್ಪಣೆಯನ್ನು ರಾಯಚೂರು ವಿ.ವಿ ಯ ಕುಲಪತಿಗಳದ ಡಾ.ಹರೀಶರಾಮಸ್ವಾಮಿ ಅವರು ಮಾಡಲಿದ್ದಾರೆ, ಕೃತಿಗಳ ಪರಿಚಯವನ್ನು ಹಿರಿಯ ಸಾಹಿತಿಗಳಾದ ವೀರಹನುಮಾನ,ಡಾ.ಶರಭೇಂದ್ರ ಸ್ವಾಮಿ ಮತ್ತು ಡಾ.ಶೈಲಜಾ ಕೊಪ್ಪರ ಅವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಜಗನ್ನಾಥ ಕುಲಕರ್ಣಿ,ಭೀಮನಗೌಡ ಇಟಗಿ, ಗುರುರಾಜ್ ಆಚಾರ್ಯ ಜೋಶಿ ತಾಳಿಕೋಟೆ,ಡಿ.ಕೆ.ಮುರಳಿಧರ ಮತ್ತು ಚಲನಚಿತ್ರ ನಿರ್ದೇಶಕರಾದ ಮಧುಸುದನ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ ಎಂದು ಹೇಳಿದರು.
ನಂತರ ದಾಸ ಸಾಹಿತ್ಯದ ಹಿರಿಯ ವಿದ್ವಾಂಸರಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅವರು ಮಾತನಾಡುತ್ತ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಹರಿದಾಸರು ಇದ್ದು ಪ್ರಾಚೀನ ಕಾಲದ ಹರಿದಾಸರ ಬಗ್ಗೆ ಈ ಕೃತಿಗಳನ್ನು ರಚಿಸಲಾಗಿದೆ, ಸಂಶೋಧನಾ ರೀತಿಯಲ್ಲಿ ಕೃತಿಗಳಲ್ಲಿ ವಿಶ್ಲೇಷಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಮೇಶ್ ಕುಲಕರ್ಣಿ ಹಾಗೂ ವಿಜಯ ಲಕ್ಷ್ಮೀ ಸೇಡಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.