ಈ ಪದ್ಮಶ್ರೀ ಪ್ರಶಸ್ತಿ ನನಗೆ ಜನ್ಮಕೊಟ್ಟ ತಂದೆ ತಾಯಿ, ನನ್ನ ಗುರುಗಳಿಗೆ ಹಾಗೂ ಇಡಿ ಕರ್ನಾಟ ಜನತೆಗೆ ಅರ್ಪಿಸುತ್ತೇನೆ‌:ಮಂಜಮ್ಮಜೋಗತಿ

Share and Enjoy !

Shares
Listen to this article

ವಿಜಯನಗರವಾಣಿ

ಹೊಸಪೇಟೆ: ಈ ಪದ್ಮಶ್ರೀ ಪ್ರಶಸ್ತಿ ನನಗೆ ಜನ್ಮಕೊಟ್ಟ ತಂದೆ ತಾಯಿ, ನನ್ನ ಗುರುಗಳಿಗೆ ಹಾಗೂ ಇಡಿ ಕರ್ನಾಟ ಜನತೆಗೆ ಅರ್ಪಿಸುತ್ತೇನೆ‌ ಎಂದು ಜಾನಪದ ಅಕಾಡಿಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪ್ರಶಸ್ತೆ ವಿಜೇತೆ ಮಾತ ಮಂಜಮ್ಮ ಜೋಗತಿ ಹೇಳಿದರು.
ಅವರು ತಾಲೂಕಿನ ಡಣಾಪುರದ ಬಿಎಂಎಂ ಇಸ್ಪಾತ್ ಲಿ. ಕಂಪನಿಯಿಂದ ಹಮ್ಮಿಕೊ ಪ್ರಶಸ್ತಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನಾನು ನನ್ನ ಪಾಡಿಗೆ ಜೋಗ್ತಿ ನೃತ್ಯ ಮಾಡ್ತ ಜೀವನವನ್ನು ಸಾಗಿಸುತ್ತಿದ್ದೆ, ಯಾವುದೊ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ನನ್ನ ಜೋಗ್ತಿ ನೃತ್ಯ ಮಾಡುವುದನ್ನ ನೋಡಿ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಚೋರುನೂರು ಕೊಟ್ರಪ್ಪನವರು ಈ ಕಾರ್ಯಕ್ರಮವನ್ನು ಯಾಕೆ ನಮ್ಮ ಇಲಾಖೆಯಿಂದ ಕಾರ್ಯಕ್ರಮಗಳನ್ನು ಕೊಡಬಾರದು ಅಂದುಕೊಂಡು ಅವರೇ ನನಗೆ ಜೋಗ್ತಿ ನೃತ್ಯ ಮಾಡೊಕೆ ಅವಕಾಶ ಮಾಡಿಕೊಟ್ಟರು ಅಲ್ಲಿಂದ ನನ್ನ ಕಾರ್ಯಕ್ರಮಗಳನ್ನ ನೋಡಿ ಹತ್ತಾರು ಕಡೆ ಅವಕಾಶಗಳು ಲಭಿಸಿದವು. ಪ್ರಶಸ್ತಿಯು ಮೊದಲು ಅವರಿಗೆ ಅರ್ಪಿಸಬೇಕು ಎಂದರು.
ನನ್ನಂತಹ ತೃತಿಯ ಲಿಂಗಿಗಳಿಗೆ ಸಂದ ಸನ್ಮಾನ, ಯಾರು ಸಹ ತೃತಿಯ ಲಿಂಗಿಗಳಿಗೆ ಅವಮಾನಿಸದೆ, ಹೀಯಾಳಿಸದೆ ನಮ್ಮಂತವರಿಗೆ ಅವಕಾಶಗಳನ್ನ ಕೊಡಿ ಎಂದರು.
ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು ಭಾವುಕರಾದರು.
ನನ್ನಂತವಳಿಗೆ ಪದ್ಮಶ್ರೀ ಪ್ರಶಸ್ತಿ ಬರುವುದಂಟಾ ಎಂದುಕೊಂಡೆ, ಎಲ್ಲಾರು ಪೋನ್ ಮಾಡಿ ಹೇಳಿದಾಗನೇ ಗೊತ್ತಾಗಿದ್ದು ಎಂದರು.
ನಿಜವಾಗಿಯು ಪದ್ಮಶ್ರೀ ಪ್ರಶಸ್ತಿಯ ಬೆಲೆ ಗೊತ್ತಿರಲಿಲ್ಲವೆಂದು ಹಾಸ್ಯದ ಚಟಕಿಯ ಮೂಲಕ ಹೇಳಿದರು. ಈ ಪ್ರಶಸ್ತಿ ಬಂದ ಮೇಲೆಯೇ ನನ್ನ ಇಡಿ ರಾಜ್ಯದ್ಯಾಂತ ಕರೆದು ಸನ್ಮಾನಿಸುತ್ತಿರುವುದರಿಂದ ಈಗ ಅದರ ಬೆಲೆ ಮತ್ತು ಘನತೆ ಗೊತ್ತಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಎಂಎಂ ಇಸ್ಪಾತ್ ಲಿ. ಕಂಪನಿಯ ಆಡಳಿತ ಮುಖ್ಯಾಧಿಕಾರಿ ಗಣೇಶ್ ಹಗ್ಡೆ, ವಾಣಿಜ್ಯ ವಿಭಾಗದ ಉಪಾಧ್ಯಕ್ಷ ಮನೋಜ್ ಅಗರಿವಾಲ್, ಡಿ.ಬಿ ನಾಯ್ಕ್, ಮರಿಯಮ್ಮನಹಳ್ಳಿಯ ಪೊಲೀಸ್ ಠಾಣೆ ಪಿಎಸ್ ಐ ಶಿವಕುಮಾರ, ಬಿಜೆಪಿ ಮುಖಂಡ ಪೂಜಾರ ಪ್ರಕಾಶ, ಜೆಡಿಎಸ್ ನ ಮುಖಂಡ ಕೃಷ್ಣಾನಾಯ್ಕ್, ಶ್ರೀನಿವಾಸ, ಬ್ಯಾಲಕುಂದಿ ರಮೇಶ್, ಬಿಎಂಎಂ ಇಸ್ಪಾತ್ ಲಿ. ಸಿಬ್ಬಂದಿಗಳಿದ್ದರು.

Share and Enjoy !

Shares