ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು :ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ
ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಕಾರ್ಯನಿರತ ಪತ್ರಕರ್ತರಾಗಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುವದರ ಜೊತೆಗೆ ಮಾನವೀಯತೆ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮುದಗಲ್ ಪತ್ರಕರ್ತ ಶರಣಯ್ಯ ಬಿ.ಒಡೆಯರ್ ರವರಿಗೆ ೨೦೨೧ ನೇ ಸಾಲಿನ ಕನ್ನಡ ಸೇವಾ ರತ್ನ ಪ್ರಶಸ್ತಿ ಭಾನುವಾರ ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ವತಿಯಿಂದ ಮಲೆಶ್ವರಂ ಪಿ.ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮ ಸಾನಿಧ್ಯವನ್ನು ಐ ಅಂಡ್ ಯು ಬೀಯಿಂಗ್ ಟುಗೆದರ್ ಫೌಂಡೇಶನ್ ಶ್ರೀ ಪ್ರಸಾದ್ ಗುರುಜಿ ಹಾಗೂ ಅಧ್ಯಕ್ಷತೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಡಾ.ಶಿವಕುಮಾರ ನಾಗರನವಿಲೆ ವಹಿಸಿದ್ದರು. ಈ ಸಂದರ್ಭದಲ್ಲಿ ಚಲನ ಚಿತ್ರ ನಟಿ ಸುಧಾರಣಿ,ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾಯಣ್ಣ, ವೆಂಕಟೇಶ, ಶಶಿಧರ ಹಾಲಡಿ, ಮಣ್ಣಿ ಮೋಹನ,ಇಂದು ಸಂಜೆ ಪತ್ರಿಕೆ ಸಂಪಾದಕ ನಾಗರಾಜ,ಖ್ಯಾತ ಹಿನ್ನೆಲೆ ಗಾಯಕ ಹೇಮಂತ,ಸಂಗೀತ ನಿರ್ದೇಶಕಿ ಮಾನಸ ಹೊಳ್ಳ,ರೂಪದರ್ಶಿ ಲಾವಣ್ಯ, ಶ್ರೀ ರೇವಣಸಿದ್ದೇಶ್ವರ ಮಠ ಹುನಕುಂಟಿಯ ಮಾದಯ್ಯ ಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.ಕಾರ್ಯಕ್ರಮವನ್ನು ಕಿರುತೆರೆ ಹಾಗೂ ಚಲನ ಚಿತ್ರ ನಟ ಧನಂಜಯ,ಉಪಸ್ಥಿತರಿದ್ದರು