ಧಡೇಸುಗೂರು ಗ್ರಾ ಪಂ ಅಧ್ಯಕ್ಷ , ಉಪಾಧ್ಯಕ್ಷ ರ ಅವಿರೋಧ ಆಯ್ಕೆ

Share and Enjoy !

Shares
Listen to this article

 

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ.

ಸಿಂಧನೂರು: ಧಡೇಸುಗೂರು ಗ್ರಾಮ ಪಂಚಾಯತಿ ಗೆ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ
ತಾಲೂಕು ಧಡೇಸುಗೂರು ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣಾ ಗೆ ಆಯ್ಕೆ ಪ್ರಕ್ರಿಯೆ ಇಂದು ಬೆಳಿಗ್ಗೆ 10 ಗಂಟೆಗೆ ಯಿಂದ ನಾಮ ಪತ್ರ ಸಲ್ಲಿಕೆ ಆರಂಭವಾಗಿತ್ತು.ನಾಮ ಪತ್ರ ಹಿಂಪಡೆಯುವಕ್ಕೆ 11 ಗಂಟೆಗೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ದುರುಗಮ್ಮ ಗಂಡ ದುರುಗಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಫಕೀರಮ್ಮ ಗಂಡ ಫಕೀರಪ್ಪ ನಾಮ ಪತ್ರ ಸಲ್ಲಿಸಿದ್ದಾರೆ.
ಇವರ ಪ್ರತಿಸ್ಪರ್ಧಿ ಯಾಗಿ ನೂತನ ಆಯ್ಕೆ ಗೊಂಡ ಗ್ರಾಮ ಪಂಚಾಯತಿ ಒಟ್ಟು 21 ಸದಸ್ಯರಲ್ಲಿ ಯಾರೂ
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡದ ಕಾರಣ ಬಹುತೇಕವಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದು.
ಇನ್ನೂ ಚುನಾವಣಾ ಅಧಿಕಾರಿಗಳು ಮಧ್ಯಾನ್ಹ 1 ‌ಗಂಟೆ ವರೆಗೆ ಘೋಷಣೆ ಮಾಡುವುದಿಲ್ಲ. ಮಧ್ಯಾನ್ಹ 1 ‌ಗಂಟೆ
ನಂತರ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು..
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಲು ಪೋಲಿಸ್ ಭದ್ರತೆ ಕಲ್ಪಿಸಲಾಗಿದೆ.

Share and Enjoy !

Shares