ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ಕೆಂದ್ರ ಸರಕಾರದ ಜನ ವಿರೋಧಿ ಕಾಯ್ದೆ ಗಳ ವಿರುದ್ಧ ರೈತಾಪಿ ಜನರಿಗೆ. ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿ ಯುವ ಜನರಿಗೆ ತಿಳಿಸುವ ಮೂಲಕ ಜನರನ್ನು ಜಾಗೃತಿ ಮೂಡಿಸಲು ಪ್ರಚಾರ ಜಾಥ ವನ್ನು ಕರ್ನಾಟಕ ಪ್ರಾಂತ ರೈತ ಸಂಘ,ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ, ಭಾರತ ವಿದ್ಯಾರ್ಥಿ ಫೆಡರೇಶನ್, ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ವತಿಯಿಂದ ಪ್ರಚಾರ ಜಾಥಾ ಕೈಗೊಂಡಿದೆ.
ಇದು ತಾಲೂಕು ತುರ್ವಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಈ ಜಾಗೃತಿ ಜಾಥಾ ಚಾಲನೆಗೊಂಡು ನಂತರ ನಗರದ ಮೂಲಕ ಶ್ರೀಪುರಂ ಜಂಕ್ಷನ್,ಸೋಮಲಾಪುರ ಸಾಲಗುಂದಾ ದಲ್ಲಿ ಪ್ರಚಾರ ಕೈಗೊಂಡು ಇಂದು ಸಂಜೆ ನಗರದ ಗಾಂಧಿ ವೃತ್ತದಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ಕಾಯಿದೆಗಳ ವಿರುದ್ಧ ಜನತೆಗೆ ಮಾಹಿತಿ ಸೆಳೆಯ ಪಡಿಸಲಿದ್ದಾರೆ