ನಾಗರಹಾಳ ಗ್ರಾಂ.ಪಂ ಅಧ್ಯಕ್ಷರಾಗಿ‌ ಈರಮ್ಮ ಆಯ್ಕೆ

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸೂಗೂರು .ಮುದಗಲ್ ಪಟ್ಟಣ ಸಮೀಪದ ನಾಗರಹಾಳ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಈರಮ್ಮ ರಾಮಣ್ಣ ಬೋವಿ ಉಪಾಧ್ಯಕ್ಷರಾಗಿ ಲಕ್ಷ್ಮವ್ವ ಸಾಬಣ್ಣ ರವರು ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಡಾ: ರಾಚಪ್ಪ ಮಾಹಿತಿ ನೀಡಿದರು.
ಅಧ್ಯಕ್ಷ ಸ್ಥಾನಕ್ಕೆ ಈರಮ್ಮ 7ಮತಗಳು ದೇವೇಂದ್ರಪ್ಪ ಬಸಪ್ಪ ಭಜಂತ್ರಿ 4ಮತಗಳು ಪಡೆದರು. 3ಮತಗಳಿಂದ ಅಧ್ಯಕ್ಷರಾಗಿ ಈರಮ್ಮ ರಾಮಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮವ್ವ ಸಾಬಣ್ಣ 6ಮತಗಳು ನೀಲಮ್ಮ ಮಾನಪ್ಪ 5 ಮತಗಳು ಪಡೆದರು 1ಮತದಿಂದ ಲಕ್ಷ್ಮವ್ವ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಡಾ:ರಾಚಪ್ಪ ಹೇಳಿದರು
ಇದೆ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸೋಮನಗೌಡ ಪಾಟೀಲ್ ಲೇಕ್ಕಿಹಾಳ ಲಿಂಗನಗೌಡ ಪಾಟೀಲ್ ರಾಮನಗೌಡ ಪಾಟೀಲ್. ಶಿವನಗೌಡ ಪಾಟೀಲ್ ಕಂಟೆಪ್ಪಗೌಡ ಗೋವಿಂದ ನಾಯಕ ರಮೇಶ ಕರಡಿ ಯಮನೂರ ಕನಕೇರಿ. ಸೇರಿದಂತೆ ಗ್ರಾ. ಪಂ. ಸದಸ್ಯರು ಸಿಬ್ಬಂದಿ ಸೇರಿದಂತೆ ಮುಂತಾದವರು ಇದ್ದರು.

Share and Enjoy !

Shares