ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದಾರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ – ಯಲ್ಲಗೌಡ ಕೆ.ಇರಬಗೇರ

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆ

ದೇವದುರ್ಗ .ತಾಲೂಕಿನಲ್ಲಿ ಸರಿಸುಮಾರು 200 ಗ್ರಾಮಗಳಿದ್ದು,ಈ ಎಲ್ಲಾ ಗ್ರಾಮಗಳಿಂದ ಜನರು ತಮ್ಮ ದೈನಂದಿ ಕಾರ್ಯ‌ ಹಾಗೂ ಉಪಜಿವನಕ್ಕಾಗಿ ಮತ್ತು ಜೀವನ ಸಾಗಿಸುವ ಎಲ್ಲಾ ವ್ಯವಹಾರಗಳನ್ನು ನಡೆಸಲು ದೇವದುರ್ಗ ತಾಲೂಕು ಮತ್ತು ದೊಡ್ಡ ನಗರ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ, ಇದರಿಂದ ದೇವದುರ್ಗ ಪಟ್ಟಣ ಸದಾ ಜನಸಂದಣಿಯಿಂದ ಕೂಡಿರುತ್ತದೆ, ಹಳ್ಳಿಯಿಂದ ಪಟ್ಟಣದತ್ತ ಧಾವಿಸಿ ಬರುವ ಸಾರ್ವಜನಿಕರಿಗೆ ಮಲಮೂತ್ರ ವಿಸರ್ಜನೆಗೆ ತುಂಬಾ ತೊಂದರೆಯಾಗುತ್ತಿದೆ, ಮಲ ಮೂತ್ರವಿಸರ್ಜನೆಗೆ 4/5 ಶೌಚಾಲಯ ನಿರ್ಮಿಸಬೇಕೆಂದು ಈ ಸದರಿ ವಿಷಯದ ಬಗ್ಗೆ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಯಾದವ ಅವರ ಆದೇಶದ ಮೇರೆಗೆ, ತಾಲೂಕ ಅಧ್ಯಕ್ಷರಾದ ಶ್ರೀ ಕೃಷ್ಣಕುಮಾರ್ ಮಡಿವಾಳ ರವರ ನೇತೃತ್ವದಲ್ಲಿ ಈ ಹಿಂದೆ ಜಯಕರ್ನಾಟಕ ಸಂಘಟನೆ ಪುರಸಭೆಗೆ ಮನವಿ ಮುಖಾಂತರ ಒತ್ತಾಯ ಮಾಡಿತ್ತು,ಈ ಸದರಿ ವಿಷಯ ಸುಮಾರು ವರ್ಷಗಳಿಂದಲೂ ಅಧಿಕಾರಿಗಳ ಗಮನದಲ್ಲಿ ಇದ್ದರೂ ಕೂಡ,ಇಲ್ಲಿಯವರೆಗೆ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳದೆ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿರುವುದು ತಾಲ್ಲೂಕು ಅಧಿಕಾರಿಗಳ ನಿರ್ಲಕ್ಷ್ಯತನ ತೋರುತ್ತಿದ್ದಾರೆ ಬೇರೆ ಗ್ರಾಮಗಳಿಂದ ಪಟ್ಟಣದತ್ತ ಧಾವಿಸಿ ಬರುವ ಸಾರ್ವಜನಿಕರಿಗೆ ತುಂಬಾ ಬೇಸರ ಸಂಗತಿಯಾಗಿರುತ್ತದೆ. ಇನ್ನುಮುಂದಾದರೂ ಪುರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಅತಿ ಜರೂರು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪತ್ರಿಕಾ ಮಾಧ್ಯಮ ಮುಖಾಂತರ ಮನವಿಮಾಡಿಕೊಂಡರು, ಒಂದು ವೇಳೆ ತಮ್ಮ ಬೇಜವಾಬ್ದಾರಿತನದಿಂದ ವರ್ತಿಸಿದಲ್ಲಿ ಮುಂದಿನ ದಿನಮಾನಗಳಲ್ಲಿ ಜಯ ಕರ್ನಾಟಕ ಸಂಘಟನೆ ಸೂಕ್ತ ಕಾನೂನು ಬದ್ಧ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ

Share and Enjoy !

Shares